Bengaluru, ಏಪ್ರಿಲ್ 4 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಗುರುವಾರ ಏಪ್ರಿಲ್ 3ರ ಸಂಚಿಕೆಯಲ್ಲಿ ತನ್ವಿ ರೆಸಾರ್ಟ್‌ಗೆ ಹೋಗಿ ಸಿಕ್ಕಿಬಿದ್ದಿರುವ ಕುರಿತು ಮನೆಯಲ್ಲಿ ತಾಂಡವ್ ಬಂದು ರಂಪ ಎಬ್ಬಿಸಿದ್ದಾನೆ. ಅವನು ಭಾಗ್ಯಳೇ ಮಗಳನ್ನು ರೆಸಾರ್ಟ್‌ಗೆ ಕಳುಹಿಸಿದ್ದಾನೆ ಎಂದುಕೊಂಡಿದ್ದಾನೆ. ಹೀಗಾಗಿ ಈ ಗಲಾಟೆಗೆ ಅವಳೇ ಕಾರಣ ಎಂದು ಅವಳನ್ನು ಮನೆಗೆ ಬಂದು ಬೈದಿದ್ದಾನೆ. ಆದರೆ ಇದಕ್ಕೆಲ್ಲಾ ಕಾರಣಳಾಗಿರುವ ಶ್ರೇಷ್ಠಾ ಮಾತ್ರ, ತಾಂಡವ್ ಜತೆ ಸುಮ್ಮನೆ ಕುಳಿತಿದ್ದಾಳೆ. ಅವಳು ನಿಜ ತಿಳಿದರೆ ಮಾತ್ರ, ತಾಂಡವ್ ತನ್ನನ್ನು ಸುಮ್ಮನೆ ಬಿಡುವುದಿಲ್ಲ ಎನ್ನುವುದು ಅವಳಿಗೆ ತಿಳಿದಿದೆ. ಅಷ್ಟರಲ್ಲಿ ಭಾಗ್ಯ, ಮನೆಗೆ ಬಂದಿದ್ದಾಳೆ, ಅವಳ ಜತೆ ತನ್ವಿ ಕೂಡ ಬಂದಿದ್ದಾಳೆ.

ತನ್ವಿ ಮತ್ತು ಭಾಗ್ಯಳನ್ನು ಕಂಡ ಕೂಡಲೇ ತಾಂಡವ್ ಮತ್ತೆ ಕಿರುಚಾಡಲು ಆರಂಭಿಸಿದ್ದಾನೆ. ಇಷ್ಟಕ್ಕೆಲ್ಲಾ ಭಾಗ್ಯಳೇ ಕಾರಣ, ಅವಳಿಂದಾಗಿಯೇ ಹೀಗೆಲ್ಲಾ ಆಯಿತು ಎಂದಿದ್ದಾನೆ. ಆಗ ಭಾಗ್ಯ, ತನ್ವಿ ರೆಸಾರ್ಟ್‌ಗೆ ಹೋಗಲು ತಾನು ಅನುಮತಿ ಕೊಟ್ಟಿಲ್ಲ ಎಂದು ಹೇಳಿದ್ದ...