Bengaluru, ಮಾರ್ಚ್ 25 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಮಾರ್ಚ್ 24ರ ಸಂಚಿಕೆಯಲ್ಲಿ ಭಾಗ್ಯ, ಸುಂದರಿ ಮತ್ತು ಪೂಜಾ ಜತೆ ಸೇರಿಕೊಂಡು ಊರಿನ ತುಂಬೆಲ್ಲಾ ಕೈತುತ್ತಿನ ಊಟದ ಮೆನು ಇರುವ ಪೋಸ್ಟರ್ ಹಂಚುತ್ತಿದ್ದಾರೆ. ಪರಿಚಯದವರು, ಅಟೋದವರು, ಹೊರಗಡೆ ಎಲ್ಲ ಕಡೆಯೂ ಸಾಧ್ಯವಾದಷ್ಟು ಜನರನ್ನು ಭೇಟಿ ಮಾಡುತ್ತಿದ್ದಾರೆ. ಊಟದ ಪೋಸ್ಟರ್ ಜತೆಗೆ, ಬೇರೆ ಕಾರ್ಯಕ್ರಮಗಳ ಆರ್ಡರ್ ಇದ್ದರೂ ಕೊಡುವಂತೆ ಭಾಗ್ಯ ಜನರನ್ನು ಕೇಳುತ್ತಿದ್ದಾಳೆ. ಎಲ್ಲರೂ ಸರಿ ಆಯ್ತು ಎನ್ನುತ್ತಿದ್ದಾರೆ. ಕೆಲವರಂತೂ ಅಸಂಬದ್ಧ ಪ್ರಶ್ನೆ ಕೇಳಿ, ಇವರಿಗೆ ಮುಜುಗರ ಉಂಟುಮಾಡಿದ್ದಾರೆ.

ಮತ್ತೊಂದೆಡೆ ಮನೆಯಲ್ಲಿ ಊಟ ಮಾಡದೇ ಮುನಿಸಿಕೊಂಡಿದ್ದ ತನ್ವಿ, ಎಲ್ಲರೂ ಮಲಗಿದ ಬಳಿಕ ಮೆಲ್ಲನೆ ಅಡುಗೆ ಮನೆಗೆ ಹೊರಟಿದ್ದಾಳೆ. ಅಲ್ಲಿ, ಅನ್ನ, ತುಪ್ಪ ಮತ್ತು ಚಟ್ನಿ ಪುಡಿ ಇರುವುದನ್ನು ಕಂಡು, ಮೆಲ್ಲನೆ ಅದನ್ನು ತೆಗೆದುಕೊಂಡು ಊಟ ಮಾಡಿದ್ದಾಳೆ. ಅಷ್ಟರಲ್ಲಿ ಭಾಗ್ಯ ಮೆಲ್ಲನೆ ಬಂದು, ಅವಳ ಬಳಿ ಕುಳಿತು ಮಾತನಾಡಿದ್ದಾಳೆ. ನಿನ್ನ ಒಳಿತಿಗಾಗಿ ಎರಡು ಮಾತು...