Bangalore, ಫೆಬ್ರವರಿ 3 -- ಬೆಂಗಳೂರು: ಬೆಂಗಳೂರಿನ ಎಚ್‌ಎಂಟಿ ಉದ್ಯಮಕ್ಕೆ ದಶಕಗಳ ಹಿಂದೆ ನೀಡಿದ್ದ ಅರಣ್ಯ ಭೂಮಿ ವಿವಾದ ಭಿನ್ನ ಸ್ವರೂಪ ಪಡೆದುಕೊಳ್ಳುತ್ತಲೇ ಇದೆ. ಈಗಾಗಲೇ ಎಚ್‌ಎಂಟಿ ಕಾರ್ಖಾನೆ ಬಂದ್‌ ಆದ ನಂತರ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗೆ ನೀಡಿದ್ದ ಭೂಮಿಯನ್ನು ವಶಕ್ಕೆ ಪಡೆದು ಅಲ್ಲಿ ಅರಣ್ಯ ಪ್ರದೇಶ ಬೆಳೆಸುವ ಪ್ರಸ್ತಾವನೆಯನ್ನು ಕರ್ನಾಟಕ ಅರಣ್ಯ ಈಗಾಗಲೇ ಸಿದ್ದಪಡಿಸಿದೆ. ಅಲ್ಲಿನ ಭೂಮಿಯನ್ನು ರಿಯಲ್‌ ಎಸ್ಟೇಟ್‌ ರೂಪದಲ್ಲಿ ವಸತಿಗಳ ನಿರ್ಮಾಣಕ್ಕೆ ಬಳಸಲಾಗಿದೆ. ಉಳಿದಿರುವ ಭೂಮಿಯನ್ನು ವಶಕ್ಕೆ ಪಡೆದು ಸರ್ಕಾರದ ಅನುಮತಿಯೇ ಇಲ್ಲದೇ ಹಸ್ತಾಂತರಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದವೂ ಕ್ರಮಕ್ಕೆ ಇಲಾಖೆ ಮುಂದಾಗಿದೆ. ಈ ನಡುವೆ ಎಚ್‌ಎಂಟಿಗೆ ನೀಡಿರುವ 443 ಎಕರೆ ಭೂಮಿ ಮಂಜೂರಾತಿ ಗೆಜೆಟ್‌ ಅಧಿಸೂಚನೆಯೇ ಇಲ್ಲ ಎನ್ನುವ ಅಂಶವೂ ಬೆಳಕಿಗೆ ಬಂದಿದೆ.

ವಿವಾದ ಭಿನ್ನ ಸ್ವರೂಪ ಪಡೆದುಕೊಂಡು ಕೇಂದ್ರ ಕೈಗಾರಿಕಾ ಇಲಾಖೆಯು ಭೂಮಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಉದ್ಯಮವೇ ಇಲ್ಲದ ಎಚ್‌ಎಂಟಿಗೆ ಅರಣ್ಯ...