Bengaluru, ಫೆಬ್ರವರಿ 23 -- ಈಗಾಗಲೇ ಬೇಸಿಗೆ ಆರಂಭವಾಗಿದ್ದು, ಈ ಸಮಯದಲ್ಲಿ ದೇಹವನ್ನು ತಂಪಾಗಿಸುವ ಆಹಾರ, ಪಾನೀಯಗಳನ್ನು ಸೇವಿಸುವುದು ಬಹಳ ಮುಖ್ಯ. ಬೆಳಗ್ಗೆ ಅಥವಾ ಇತರೆ ಯಾವುದೇ ಸಮಯದಲ್ಲಿ ರಾಗಿ ಗಂಜಿಯನ್ನು ಸೇವಿಸಬಹುದು. ಇದು ದೇಹವನ್ನು ನಿರ್ಜಲೀಕರಣದಿಂದಲೂ ಕಾಪಾಡಲು ಸಹಕಾರಿಯಾಗಿದೆ. ಈ ಪಾಕವಿಧಾನ ತುಂಬಾ ಸರಳ. ರಾಗಿ ಗಂಜಿಯು ಬಹಳ ರುಚಿಕರ ಖಾದ್ಯವಾಗಿದೆ. ಇದನ್ನು ತಯಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಆರೋಗ್ಯಕರ ಆಹಾರವನ್ನು ಸೇವಿಸಲು ಬಯಸುವವರು ರಾಗಿ ಗಂಜಿ ಪಾಕವಿಧಾನವನ್ನು ಟ್ರೈ ಮಾಡಬಹುದು. ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಸಾಮಾಗ್ರಿಗಳು: 1/4 ಕಪ್ ರಾಗಿ ಹಿಟ್ಟು, 3/4 ಕಪ್ ಮೊಸರು, 1 ಚಮಚ ತುಪ್ಪ, 1 ಚಮಚ ಜೀರಿಗೆ, 1/2 ಚಮಚ ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು, 500 ಮಿಲಿ ನೀರು, ಕರಿಬೇವಿನ ಎಲೆಗಳು/ಕೊತ್ತಂಬರಿ ಸೊಪ್ಪು, ಇಂಗು (ಬೇಕಿದ್ದರೆ).

ಮಾಡುವ ವಿಧಾನ: ಒಲೆಯ ಮೇಲೆ ಒಂದು ಪಾತ್ರೆಯನ್ನು ಇರಿಸಿ ಮತ್ತು ಅದರಲ್ಲಿ 300 ಮಿಲಿ ನೀರನ್ನು ಹಾಕಿ. ನ...