Bangal;ore, ಮೇ 24 -- ಬೆಂಗಳೂರು: ಈ ಬಾರಿಯ ನೈಋತ್ಯ ಮುಂಗಾರು ಮಳೆ ಕೇರಳವನ್ನು ಮೇ ಕೊನೆಯ ವಾರದಲ್ಲಿ ಪ್ರವೇಶಿಸಬಹುದು ಎನ್ನುವ ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯನ್ನು ಮೀರಿ ಮೇ 24ರ ಶನಿವಾರವೇ ಮುಂಗಾರಿನ ಪ್ರವೇಶವಾಗಿದೆ. ಕೇರಳದ ಹಲವು ಭಾಗಗಳಲ್ಲಿ ಶನಿವಾರವೇ ಮಳೆಯಾಗಿದೆ. ಕೇರಳಕ್ಕೆ ಹೊಂದಿಕೊಂಡಿರುವ ಮೈಸೂರು,ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ ಸಹಿತ ಹಲವು ಭಾಗಗಳಲ್ಲಿ ಶನಿವಾರ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ, ಆಗಾಗ ಮಳೆ ಸುರಿಯುತ್ತಲೇ ಇದೆ. ಇದರಿಂದ ಈ ಬಾರಿ ಮುಂಗಾರು ಕೇರಳದ ಮೂಲಕ ಭಾರತವನ್ನು ಬೇಗನೇ ಪ್ರವೇಶಿಸಿದಂತಾಗಿದ್ದು,ಮಳೆಗಾಲ ಆರಂಭಗೊಂಡಂತಾಗಿದೆ. 2009ರಲ್ಲಿ ಮಾತ್ರ ಮೇ 23 ರಂದು ನೈಋತ್ಯ ಮುಂಗಾರು ಕೇರಳ ಪ್ರವೇಶಿಸಿದ್ದನ್ನು ಬಿಟ್ಟರೆ ಇತ್ತೀಚಿನ ವರ್ಷಗಳಲ್ಲಿ ಮೇ ಕೊನೆಗೆ ಇಲ್ಲವೇ ಜೂನ್ ಮೊದಲ ವಾರ ಪ್ರವೇಶಿಸಿದ ಉದಾಹರಣೆಗಳಿವೆ.
Published by HT Digital Content Services with permission from HT Kannada....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.