ಭಾರತ, ಫೆಬ್ರವರಿ 15 -- ಕೇರಳದ ಚರ್ಚ್ ಕ್ಯಾಂಪಸ್‌ನಲ್ಲಿ ಉತ್ಖನನ ಮಾಡುವಾಗ ದೇವಾಲಯದ ಅವಶೇಷಗಳು ಕಾಣಸಿಕ್ಕವು. ಇದಾದ ಬಳಿಕ, ದೇವಪ್ರಶ್ನೆ (ಜ್ಯೋತಿಷ್ಯ ಶಾಸ್ತ್ರದ ಒಂದು ಪ್ರಕ್ರಿಯೆ) ನಡೆಸುವುದಕ್ಕೆ ಚರ್ಚ್ ಆಡಳಿತ ಮಂಡಳಿ ಹಿಂದೂಗಳಿಗೆ ಅವಕಾಶ ಮಾಡಿಕೊಟ್ಟಿತು. ಆ ದೇವಪ್ರಶ್ನೆಯಲ್ಲಿ ಪ್ರಾಚೀನ ದೇವಾಲಯಕ್ಕೆ ಸಂಬಂಧಿಸಿದ ಇತಿಹಾಸ ವಿ‍ಶೇಷಗಳು ಕಂಡುಬಂದವು. ಈ ಕ್ರಿಶ್ಚಿಯನ್ - ಹಿಂದೂ ಸಾಮರಸ್ಯ ದೇಶದ ಗಮನಸೆಳೆದಿದೆ. ಅಂದ ಹಾಗೆ, ಕೇರಳದ ಪಾಲಾಯಿಯಲ್ಲಿರುವ ಕ್ಯಾಥೋಲಿಕ್ ಚರ್ಚ್‌ ಕ್ಯಾಂಪಸ್‌ನಲ್ಲಿ ಈ ಪ್ರಾಚೀನ ದೇವಾಲಯದ ಅವಶೇಷ ಕಾಣಸಿಕ್ಕಿರುವುದು. ಅಲ್ಲಿ ಈಗ ಹಿಂದೂಗಳು ಪ್ರಾರ್ಥನೆ ಸಲ್ಲಿಸುವುದಕ್ಕೆ ಚರ್ಚ್ ಆಡಳಿತ ಅವಕಾಶ ಮಾಡಿಕೊಟ್ಟಿದೆ.

ಕೇರಳದ ಪಾಲಾಯಿಯಲ್ಲಿರುವ ಕ್ಯಾಥೋಲಿಕ್ ಚರ್ಚ್‌ ಕ್ಯಾಂಪಸ್‌ನಲ್ಲಿ ಕೃಷಿ ಕೆಲಸಕ್ಕಾಗಿ ನೆಲ ಅಗೆಯವಾಗ ಶಿವಲಿಂಗ ಸೇರಿ ದೇಗುಲದ ಅನೇಕ ಅವಶೇಷಗಳು ಕಾಣಸಿಕ್ಕಿದ್ದವು. 1.8 ಎಕರೆ ಪ್ರದೇಶದಲ್ಲಿ ಈ ಅವಶೇಷಗಳಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಕೆಸವಿನ ಕೃಷಿಗಾಗಿ ನೆಲ ಅಗೆಯುವ...