Mysuru, ಜೂನ್ 18 -- ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು ಹೊರ ಹರಿವಿನ ಪ್ರಮಾಣವನ್ನು 25000 ಕ್ಯೂಸೆಕ್‌ಗೆ ಏರಿಸಲಾಗಿದೆ.

ಕೇರಳ ಭಾಗದಲ್ಲಿ ಎಡಬಿಡದೇ ಮಳೆ ಸುರಿಯುತ್ತಿರುವ ಕಾರಣದಿಂದ ನೀರಿನ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದೆ.

ಜೂನ್‌ ಮೂರನೇ ವಾರದಲ್ಲಿಯೇ ಈ ಬಾರಿ ಕಬಿನಿ ಜಲಾಶಯ ತುಂಬುವ ಹಂತಕ್ಕೆ ಬಂದಿದೆ. ಇದರಿಂದ ಹೊರ ಹರಿವಿನ ಪ್ರಮಾಣವನ್ನು ಏರಿಕೆ ಮಾಡಲಾಗಿದೆ.

ಕಬಿನಿ ಜಲಾಶಯದಲ್ಲಿ ಬುಧವಾರ ಮಧ್ಯಾಹ್ನದ ಹೊತ್ತಿಗೆ 2280.90 ಅಡಿ ನೀರು ಸಂಗ್ರಹವಾಗಿದೆ.

ಉತ್ತಮ ಮಳೆ ಕಾರಣದಿಂದ ಕಬಿನಿ ಜಲಾಶಯದಲ್ಲಿ 17.57 ಟಿಎಂಸಿ ನೀರು ಸಂಗ್ರಹಣೆಯಾಗಿದೆ.

ಕಬಿನಿ ಜಲಾಶಯದಿಂದ ಬೆಂಗಳೂರು, ಮೈಸೂರಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ.

ಕರ್ನಾಟಕ ಮಾತ್ರವಲ್ಲದೇ ತಮಿಳುನಾಡಿಗೂ ಇಲ್ಲಿಂದಲೇ ನೀರು ಹರಿದು ಹೋಗುತ್ತದೆ.

ಕಬಿನಿ ಜಲಾಶಯದಿಂದ ಹೊರ ಹರಿವಿನ ಪ್ರಮಾಣವನ್ನು ಹೆಚ್ಚಿರುವ ಕಾರಣಕ್ಕೆ ನಂಜನಗೂಡು ಸಹಿತ ನಾನಾ ಭಾಗಗಳಲ್ಲಿ ಪ್ರವಾಹದ ಸನ್ನಿವೇಶ ಎದುರಾಗಲಿದ್ದು. ನದಿ...