ಭಾರತ, ಫೆಬ್ರವರಿ 14 -- ಕೋಯಿಕ್ಕೋಡ್: ಕೇರಳದ ದೇವಸ್ಥಾನದಲ್ಲಿ ದುರಂತವೊಂದು ಸಂಭವಿಸಿದೆ. ಕೊಯ್ಲಾಂಡಿಯ ಕುರುವಂಗಾಡ್‌ನಲ್ಲಿರುವ ಮಣಕ್ಕುಳಂಗರ ಭಗವತಿ ದೇವಸ್ಥಾನದಲ್ಲಿ ಗುರುವಾರ ನಡೆದ ಉತ್ಸವದ ಸಮಯದಲ್ಲಿ ಆನೆಗಳು ಮದವೇರಿ ಓಡಾಡಿದ್ದು 3 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಕನಿಷ್ಠ 36 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ದೇವಸ್ಥಾನದಲ್ಲಿ ಉತ್ಸವ ನಡೆಯುತ್ತಿದ್ದಾಗ, ಪಟಾಕಿ ಸದ್ದಿಗೆ ಆನೆಗಳಿಗೆ ಮದವೇರಿದೆ. ಆರಂಭದಲ್ಲಿ ಮಾವುತರಿಗೆ ಆನೆಗಳನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ.‌ ಭಯದಿಂದ ಜನರು ಕೂಡಾ ಪಾರಾಗಲು ಓಡಿದ್ದಾರೆ.

ದುರ್ಘಟನೆಲ್ಲಿ ಲೀಲಾ (68), ರಾಜನ್ (66), ಮತ್ತು ಅಮ್ಮುಕ್ಕುಟ್ಟಿ (65) ಎಂಬವರು ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಹಿರಿಯ ನಾಗರಿಕರು. ಇವರಲ್ಲಿ ಲೀಲಾ ಮತ್ತು ಅಮ್ಮುಕುಟ್ಟಿ ಕುರುವಂಗಾಡ್ ಮೂಲದವರು. ಉಳಿದಂತೆ ಗಾಯಾಳುಗಳಲ್ಲಿ 21 ಜನರನ್ನು ಕೊಯ್ಲಾಂಡಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ಹದಿನಾಲ್ಕು ಜನರನ್ನು ಕೋಯಿಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸ...