ಭಾರತ, ಮೇ 5 -- ಕೇದಾರನಾಥ ಧಾಮಕ್ಕೆ ತೆರಳುವ ಯಾತ್ರಿಕರ ಗಮನಕ್ಕೆ. ಹೆಲಿಕಾಪ್ಟರ್‌ನಲ್ಲಿ ಕೇದಾರನಾಥ ಯಾತ್ರೆಗೆ ಹೋಗುವುದಾದರೆ ಜೂನ್ ತಿಂಗಳ ಯಾತ್ರೆಗೆ ಸಂಬಂಧಿಸಿದ ಮುಂಗಡ ಕಾಯ್ದಿರಿಸುವಿಕೆ ನಾಡಿದ್ದು ಅಂದರೆ ಮೇ 7 ರಿಂದ ಶುರುವಾಗುತ್ತಿದೆ.

ಕೇದಾರನಾಥ ಧಾಮಕ್ಕೆ ತೆರಳುವ ಯಾತ್ರಿಕರು ಚಾರ್‌ಧಾಮ ಯಾತ್ರೆಗೆ ಸಂಬಂಧಿಸಿದ ನೋಂದಣಿ ಮಾಡಿಸಿಕೊಂಡಿರಬೇಕು. ಅಂಥವರು ಹೆಲಿಕಾಪ್ಟರ್ ಸೇವೆ ಬಳಸಿಕೊಂಡು ಕೇದಾರನಾಥ ಧಾಮಕ್ಕೆ ತೆರಳುವ ಚಿಂತನೆಯಲ್ಲಿದ್ದರೆ ಜೂನ್ 1 ರಿಂದ 30ರ ತನಕ ಕೇದಾರನಾಥ ಹೆಲಿಕಾಪ್ಟರ್‍‌ ಸೇವೆಯ ಬುಕ್ಕಿಂಗ್ ಮೇ 7 ರಿಂದ ಶುರುವಾಗಲಿದೆ.

ಕೇದಾರನಾಥ ಹೆಲಿಕಾಪ್ಟರ್ ಯಾತ್ರಾ ಸೇವೆಯ ಬುಕ್ಕಿಂಗ್ ನಿರ್ವಹಣೆಯ ಹೊಣೆಗಾರಿಕೆಯನ್ನು ಐಆರ್‌ಸಿಟಿಸಿ ಹೊತ್ತುಕೊಂಡಿದೆ. ಮೇ 7 ರಂದು ಮಧ್ಯಾಹ್ನ 12 ಗಂಟೆಗೆ ಆನ್‌ಲೈನ್ ಬುಕಿಂಗ್ ಪ್ರಾರಂಭವಾಗಲಿದೆ.

ಕೇದಾರನಾಥ ಹೆಲಿ ಸೇವಾ ಟಿಕೆಟ್‌ಗಳನ್ನು ಐಆರ್‌ಸಿಟಿಸಿ ವೆಬ್‌ಸೈಟ್ www.heliyatra.irctc.co.in ಮೂಲಕ ಬುಕ್ ಮಾಡಬಹುದು. ಇದರಲ್ಲಿ ಅಕೌಂಟ್ ಕ್ರಿಯೇಟ್ ಮಾಡಬೇಕು.

ಯಾವುದಕ್ಕೂ ...