ಭಾರತ, ಜನವರಿ 31 -- ಸಾಹಿತ್ಯ ಅಕಾಡೆಮಿಯು 2025ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಾಗಿ ಭಾರತೀಯ ಲೇಖಕರು, ಲೇಖಕರ ಹಿತೈಷಿಗಳು ಮತ್ತು ಪ್ರಕಾಶಕರಿಂದ ಪುಸ್ತಕಗಳನ್ನು ಆಹ್ವಾನಿಸಿದೆ. 2019, 2020, 2021, 2022 ಮತ್ತು 2023ರಲ್ಲಿ ಮೊದಲು ಪ್ರಕಟವಾದ ಪುಸ್ತಕವನ್ನು ಪ್ರಶಸ್ತಿಗಾಗಿ ಪರಿಗಣಿಸಲಾಗುತ್ತದೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು 1 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಫಲಕವನ್ನು ಹೊಂದಿರುತ್ತದೆ. ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಫೆಬ್ರವರಿ 28, 2025ರೊಳಗೆ ಸಲ್ಲಿಸಬೇಕು ಎಂದು ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಹಿತ್ಯ ಅಕಾಡೆಮಿಯು 1955ರಿಂದ ಪ್ರತಿವರ್ಷ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡುತ್ತ ಬಂದಿದೆ. 24 ಭಾರತೀಯ ಭಾಷೆಗಳ ಪುಸ್ತಕಗಳಿಗೆ ಪ್ರಶಸ್ತಿ ನೀಡುತ್ತಿದೆ. ಅಸ್ಸಾಮ್‌, ಬೆಂಗಾಳಿ, ಬೊಡೊ, ದೊಗ್ರಿ, ಇಂಗ್ಲಿಷ್‌, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ರಾಜಸ್ಥಾನಿ, ಸಂಸ್ಕೃತ, ಸಿಂಧ...