Bangalore, ಮೇ 14 -- ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿಯು 2025ರ ಸಾಲಿನ ಭಾಷಾಂತರ ಪ್ರಶಸ್ತಿಗೆ ಪ್ರವೇಶಗಳನ್ನು ಆಹ್ವಾನಿಸಿದೆ. ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅದರೊಂದಿಗೆ ಅನುವಾದಿತ ಪುಸ್ತಕದ ಒಂದು ಪ್ರತಿಯನ್ನು ಇದೇ ಮೇ 31ರೊಳಗೆ ಕಳಿಸಬೇಕು.2025ರ ಭಾಷಾಂತರ ಪ್ರಶಸ್ತಿಗೆ 2019 ರಿಂದ 2023ರವರೆಗಿನ ಅವಧಿಯಲ್ಲಿ ಪ್ರಕಟವಾದ ಅನುವಾದಿತ ಕೃತಿಗಳು ಅರ್ಹವಾಗಿರುತ್ತವೆ.ಅನುವಾದಕ/ಪ್ರಕಾಶಕ/ಅನುವಾದಕರ ಹಿತೈಷಿಗಳು- ಯಾರಾದರೂ ಪುಸ್ತಕ ಕಳಿಸಬಹುದು.ಕನ್ನಡಕ್ಕೆ ಅನುವಾದಗೊಂಡಿರುವ ಪುಸ್ತಕಗಳನ್ನು ಬೆಂಗಳೂರಿನಲ್ಲಿ ಇರುವ ದಕ್ಷಿಣ ಭಾರತ ವಲಯ ಕಚೇರಿಗೇ ಕಳಿಸಬೇಕು. (ತೆಲುಗು, ತಮಿಳು ಮತ್ತು ಮಲಯಾಳಂ ಗೆ ಅನುವಾದಗೊಂಡಿರುವ ಪುಸ್ತಕಗಳನ್ನೂ ಕೂಡ ಬೆಂಗಳೂರಿನ ಕಚೇರಿಗೇ ಸಲ್ಲಿಸಬೇಕು.)

ಆಫೀಸರ್-ಇನ್-ಚಾರ್ಜ್‌ ಕೇಂದ್ರ ಸಾಹಿತ್ಯ ಅಕಾಡೆಮಿ, ದಕ್ಷಿಣ ಭಾರತ ವಲಯ ಕಚೇರಿ, ಕಲಾಗ್ರಾಮದ ಎದುರು, ಪೆಟ್ರೋಲ್ ಬಂಕ್ ಹತ್ತಿರ, ಹಳೆಯ ಹೊರವರ್ತುಲ ರಸ್ತೆ, ಜ್ಞಾನ ಜ್ಯೋತಿನಗರ, ಬೆಂಗಳೂರು-560056

ಇನ್ನೂ...