ಭಾರತ, ಏಪ್ರಿಲ್ 16 -- ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿದ ವಕ್ಫ್‌ ಕಾಯ್ದೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ಶುರುಮಾಡಿದ ಸುಪ್ರೀಂ ಕೋರ್ಟ್‌, ಬುಧವಾರ (ಏಪ್ರಿಲ್ 16) ಯಾವುದೇ ಮಧ್ಯಂತರ ಆದೇಶ ನೀಡಿಲ್ಲ. ಗುರುವಾರ (ಏಪ್ರಿಲ್ 17) ಈ ಕೇಸ್‌ ವಿಚಾರಣೆ ಮುಂದುವರಿಸುವುದಾಗಿ ತಿಳಿಸಿದ ಸುಪ್ರೀಂ ಕೋರ್ಟ್‌, ಮೂರು ವಿಚಾರಗಳ ಬಗ್ಗೆ ಕಾಳಜಿ ವ್ಯಕ್ತಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್, ಕೆವಿ ವಿಶ್ವನಾಥನ್ ಅವರಿದ್ದ ನ್ಯಾಯಪೀಠ ಈ ಕೇಸ್‌ನ ವಿಚಾರಣೆ ನಡೆಸಿದ್ದು, ಪಿಟಿಷನ್‌ಗೆ ಸಂಬಂಧಿಸಿ ನೋಟಿಸ್ ಜಾರಿಗೊಳಿಸಲು ಹಾಗೂ ಕಿರು ತೀರ್ಪು ನೀಡಲು ಒಲವು ತೋರಿತು. ಆದಾಗ್ಯೂ, ಮಧ್ಯಂತರ ಆದೇಶಕ್ಕೂ ಮೊದಲು ಕೇಂದ್ರ ಸರ್ಕಾರ ಹಾಗೂ ಕೆಲವು ರಾಜ್ಯ ಸರ್ಕಾರಗಳು ಅವರ ಹೇಳಿಕೆಗಳನ್ನು ದಾಖಲಿಸುವುದಕ್ಕೆ ಸಮಯಾವಕಾಶ ಕೋರಿವೆ. ಹೀಗಾಗಿ, ನ್ಯಾಯಪೀಠ ಇದರ ವಿಚಾರಣೆಯನ್ನು ನಾಳೆ (ಏಪ್ರಿಲ್ 17) ಅಪರಾಹ್ನ 2 ಗಂಟೆಗೆ ವಿಚಾರಣೆಯನ್ನು ಮುಂದೂಡಿತು.

ವಕ್ಫ್‌ ಕಾಯ್ದೆಯ ಸಾಂ...