Delhi, ಮಾರ್ಚ್ 28 -- ದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (DA) ಯಲ್ಲಿ ಶೇ. 2 ರಷ್ಟು ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ,. ಇದನ್ನು ಈಗಿನ 53% ರಿಂದ 55% ಕ್ಕೆ ಹೆಚ್ಚಿಸಲಾಗಿದೆ. ಈ ಹೆಚ್ಚಳವು ಹಣದುಬ್ಬರವನ್ನು ಸರಿದೂಗಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಹಿಂದಿನ ತುಟ್ಟಿ ಭತ್ಯೆ ಹೆಚ್ಚಳವು ಜುಲೈ 2024 ರಲ್ಲಿ 50% ರಿಂದ 53% ಕ್ಕೆ ತಲುಪಿತ್ತು. 7ನೇ ವೇತನ ಆಯೋಗದಡಿ ತಮ್ಮ ತುಟ್ಟಿಭತ್ಯೆ (DA) ಹೆಚ್ಚಳದ ಘೋಷಣೆಯನ್ನು ಕಾತರದಿಂದ ಕಾಯುತ್ತಿದ್ದ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಇದು ಯುಗಾದಿ ಉಡುಗೊರೆ ಎಂದೇ ಭಾವಿಸಲಾಗುತ್ತಿದೆ. ವರದಿಗಳ ಪ್ರಕಾರ, ಡಿಎ ಹೆಚ್ಚಳದ ಕುರಿತು ಅಂತಿಮ ನಿರ್ಧಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (DA) ಯಲ್ಲಿ ಶೇ. 2 ರಷ್ಟು ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ. ಈ ಪರಿಷ್ಕರಣೆಯೊಂದಿಗೆ, ತುಟ್ಟಿ ಭ...