ಭಾರತ, ಫೆಬ್ರವರಿ 1 -- Budget 2025 date and time: ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರ ಶನಿವಾರದಂದು ಸತತ ಎಂಟನೇ ಬಜೆಟ್ (ಕೇಂದ್ರ ಬಜೆಟ್ 2025) ಅನ್ನು ಸಂಸತ್‌ನಲ್ಲಿ ಮಂಡಿಸಲಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಮೊದಲ ಪೂರ್ಣ ಪ್ರಮಾಣದ ಬಜೆಟ್‌. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಕೂಡ ಹೌದು. ಮೊದಲ ಎರಡು ಅವಧಿಗೆ ಬಿಜೆಪಿ ಬಹುಮತದ ಸರ್ಕಾರ ಇತ್ತು. ಈ ಬಾರಿ ಕೂಡ ಕೇಂದ್ರ ಬಜೆಟ್ 2025-26 ಅನ್ನು ಪೇಪರ್ ಲೆಸ್ ಬಜೆಟ್ ಆಗಿ ಮಂಡಿಸಲಾಗುತ್ತಿದೆ.

ಕೇಂದ್ರ ಬಜೆಟ್ 2025-26 ಎಂಬುದು ಭಾರತ ಸರ್ಕಾರ ಮುಂಬರುವ ವರ್ಷಕ್ಕೆ ಸಂಬಂಧಿಸಿ ನೀಡುವ ಹಣಕಾಸು ಹೇಳಿಕೆ. ಮುಂಬುರುವ ಹಣಕಾಸು ವರ್ಷ ಎಂದರೆ 2025ರ ಏಪ್ರಿಲ್ 1 ರಿಂದ 2026ರ ಮಾರ್ಚ್‌ 31ರ ತನಕ ಅವಧಿ. ಈ ಅವಧಿಯಲ್ಲಿ ಫೆಡರಲ್ ಸರ್ಕಾರದ ಪ್ರಸ್ತಾವಿತ ವೆಚ್ಚಗಳು ಮತ್ತು ಆದಾಯಗಳನ್ನು ಅಂದಾಜು ಲೆಕ್ಕ ಹಾಕಿ ಕೇಂದ್ರ ಬಜೆಟ್‌ನಲ್ಲಿ ಸಂಸತ್‌ನಲ್ಲಿ ಮಂಡಿಸಿ ...