ಭಾರತ, ಜನವರಿ 28 -- Budget 2025 date and time, Live: ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರ ಶನಿವಾರ ಸತತ ಎಂಟನೇ ಬಜೆಟ್ ಮಂಡಿಸಲಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಮೊದಲ ಪೂರ್ಣಾವಧಿ ಬಜೆಟ್ (ಕೇಂದ್ರ ಬಜೆಟ್ 2025) ಇದಾಗಿದೆ. ಕೇಂದ್ರ ಮುಂಗಡಪತ್ರವನ್ನು 2021ರಿಂದ ಪೇಪರ್‌ಲೆಸ್ ಆಗಿ ಮಂಡಿಸಲಾಗುತ್ತಿದೆ. ಈ ಬಾರಿ ಕೂಡ ಕೇಂದ್ರ ಬಜೆಟ್ 2025-26 ಡಿಜಿಟಲ್ ರೂಪದಲ್ಲಿ ಮಂಡನೆಯಾಗಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ 8ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಜನವರಿ 31 ರಂದು ಸಂಸತ್‌ನ ಬಜೆಟ್ ಅಧಿವೇಶನ ಶುರುವಾಗುತ್ತಿದ್ದು, ಅಂದೇ ಆರ್ಥಕ ಸಮೀಕ್ಷೆಯೂ ಪ್ರಕಟವಾಗಲಿದೆ.

ಕೇಂದ್ರ ಬಜೆಟ್‌ ಎಂಬುದು ಮುಂಬರುವ ಆರ್ಥಿಕ ವರ್ಷದಲ್ಲಿ (ಏಪ್ರಿಲ್ 1 ರಿಂದ ಮಾರ್ಚ್ 31) ಭಾರತ ಸರ್ಕಾರದ ಖರ್ಚು ವೆಚ್ಚ ಮತ್ತು ಅದಾಯಗಳ ಪ್ರಸ್ತಾವನೆಯ ಕಡತ. ಸರಳವಾಗಿ ಹೇಳಬೇಕು ಎಂದರೆ ವಾರ್ಷಿಕ ಹಣಕಾಸು ಹೇಳಿಕೆ. 2019ರಿಂದ ಸರ್ಕಾರದ ಹಣಕಾಸಿನ, ಖರ್ಚು, ಆದಾಯ ಮತ್ತ...