ಭಾರತ, ಜನವರಿ 28 -- Union Budget 2025 Expectations: ಕೇಂದ್ರ ಬಜೆಟ್ 2025ರ ಮಂಡನೆಗೆ ದಿನಗಣನೆ ಶುರುವಾಗಿದೆ. ಸಹಜವಾಗಿಯೇ, ಆದಾಯ ತೆರಿಗೆ ಸಂಬಂಧಿಸಿದ ನೀತಿಗಳು, ಸಂಭಾವ್ಯ ಬದಲಾವಣೆಗಳ ಕುರಿತು ಜನಸಾಮಾನ್ಯರಿಗೆ ವಿಶೇಷವಾಗಿ ಮಧ್ಯಮವರ್ಗದ ಜನರ ನಡುವೆ ಹೆಚ್ಚಿನ ಚರ್ಚೆ ನಡೆಯುತ್ತಿದೆ. ವೈಯಕ್ತಿಕ ಆದಾಯ ತೆರಿಗೆ, ಇವಿಗಳು ಮತ್ತು ಕ್ರಿಪ್ಟೋದಂತಹ ನಿರ್ದಿಷ್ಟ ತೆರಿಗೆ ಕ್ಷೇತ್ರಗಳು, ವಸತಿ ಯೋಜನೆಯ ಪ್ರಯೋಜನಗಳು, ಉಳಿತಾಯ ಪ್ರೋತ್ಸಾಹ ಮತ್ತು ಹೆಚ್ಚಿನವುಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಕೇಂದ್ರೀಕರಿಸುವ ಹಲವಾರು ಶಿಫಾರಸುಗಳನ್ನು ತಜ್ಞರು ನೀಡಿದ್ದಾರೆ. ಈ ಪ್ರಸ್ತಾವಿತ ಸುಧಾರಣೆಗಳು ತೆರಿಗೆದಾರರಿಗೆ ಪರಿಹಾರ ನೀಡುವ ಗುರಿಯನ್ನು ಹೊಂದಿವೆ. ಆದಾಗ್ಯೂ, ಮಧ್ಯಮ ವರ್ಗ ಬಯಸುವ 10 ಆದಾಯ ತೆರಿಗೆ ಬದಲಾವಣೆಗಳಿವು.

1) ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆ: ವೈಯಕ್ತಿಕ ಆದಾಯ ತೆರಿಗೆ ದರವನ್ನು ಕಡಿಮೆ ಮಾಡುವ ಮೂಲಕ ಮಧ್ಯಮ ವರ್ಗದ ತೆರಿಗೆದಾರರಿಗೆ ಪರಿಹಾರ ನೀಡಲು ತೆರಿಗೆ ಸ್ಲ್ಯಾಬ್‌ ಪರಿಷ್ಕರಿಸುವುದನ್ನು ಸರ್ಕಾರ ಪರಿ...