New Delhi,ನವದೆಹಲಿ, ಜನವರಿ 31 -- Budget Session 2025: ಸಂಸತ್ತಿನ ಬಜೆಟ್ ಅಧಿವೇಶನವು ಇಂದಿನಿಂದ ಪ್ರಾರಂಭವಾಗಿದೆ. ಪಿಎಂ ಮೋದಿ ಅವರು ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದರು. 2014ರ ನಂತರ ಇದೇ ಮೊದಲ ಸಲ ಸಂಸತ್ ಅಧಿವೇಶನವು ಯಾವುದೇ ವಿದೇಶಿ ಹಸ್ತಕ್ಷೇಪವಿಲ್ಲದೇ ಶುರುವಾಗುತ್ತಿದೆ. ಇದನ್ನು ಗಮನಿಸಬೇಕು ಎಂದು ಪ್ರಧಾನಿ ಮೋದಿ ಹೇಳುವ ಮೂಲಕ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನೂ ಕೆಣಕಿದರು.

ಅಧಿವೇಶನಕ್ಕೆ ಮೊದಲು ಸಮಸ್ಯೆಗಳನ್ನು ಸೃಷ್ಟಿಸಲು ವಿದೇಶ ಶಕ್ತಿಯಿಂದ ಈ ಬಾರಿ ಯಾವುದೇ ಪ್ರಯತ್ನವಿಲ್ಲ ಎಂಬುದು ಮೊದಲ ಬಾರಿಗೆ ಅನುಭವಕ್ಕೆ ಬಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಬಡ ಮತ್ತು ಮಧ್ಯಮ ವರ್ಗದವರಿಗೆ ಆಶೀರ್ವಾದ ನೀಡುವಂತೆ ನಾನು ಲಕ್ಷ್ಮಿ ದೇವಿಯನ್ನು ಪ್ರಾರ್ಥಿಸುತ್ತೇನೆ. ಮುಂದಿನ ಹಣಕಾಸು ವರ್ಷದ ಬಜೆಟ್ ಹೊಸ ನಂಬಿಕೆಯನ್ನು ಸೃಷ್ಟಿಸುವುದಲ್ಲದೆ, ಸುಧಾರಣೆಗಳನ್ನು ಬಲಪಡಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ಬಹುಶಃ 2014 ರಿಂದೀಚೆಗೆ ಇದೇ ಮೊದಲ ಸಲ ಸಂಸತ್ ಅಧಿವೇಶನಕ್ಕೆ...