ಭಾರತ, ಜನವರಿ 31 -- Mahalakshmi Ashtakam: ಸಂಸತ್‌ನ ಬಜೆಟ್ ಅಧಿವೇಶನ ಇಂದು (ಜನವರಿ 31) ಶುರುವಾಗಿದ್ದು, ಇದಕ್ಕೂ ಮೊದಲು ಇದರಲ್ಲಿ ಭಾಗವಹಿಸುವುದಕ್ಕಾಗಿ ಸಂಸತ್ ಭವನಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು, ಶುಭ ಫಲಕ್ಕಾಗಿ ಮಹಾಲಕ್ಷ್ಮಿಯನ್ನು ಪ್ರಾರ್ಥಿಸುವುದು ವಾಡಿಕೆ ಎಂದು ಹೇಳುತ್ತ, ಲಕ್ಷ್ಮಿ ಸ್ತೋತ್ರದ ಸಾಲುಗಳನ್ನು ಪಠಿಸಿದ್ದರು.

ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿಮುಕ್ತಿಪ್ರದಾಯಿನಿ |

ಮಂತ್ರಮೂರ್ತೇ ಸದಾ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ |

ಈ ಸಾಲುಗಳನ್ನು ಬಹಳ ಸ್ಪಷ್ಟವಾಗಿ ಪಠಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಬಡ ಮತ್ತು ಮಧ್ಯಮ ವರ್ಗದವರಿಗೆ ಲಕ್ಷ್ಮೀ ದೇವಿಯ ಕೃಪಾಕಟಾಕ್ಷ ಸದಾ ಇರಲಿ ಎಂದು ಹಾರೈಸಿದರು.

"ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ, ನಾನು ಸಂಪತ್ತು ಮತ್ತು ಸಮೃದ್ಧಿಯ ದೇವತೆ ಲಕ್ಷ್ಮಿ ದೇವಿಗೆ ನಮಸ್ಕರಿಸುತ್ತೇನೆ. ಲಕ್ಷ್ಮಿ ದೇವಿಯು ನಮ್ಮ ದೇಶದ ಬಡ ಮತ್ತು ಮಧ್ಯಮ ವರ್ಗದವರನ್ನು ಆಶೀರ್ವದಿಸುವುದ...