ಭಾರತ, ಜನವರಿ 31 -- Union Budget 2025 Session: ಸಂಸತ್ತಿನ ಬಜೆಟ್ ಅಧಿವೇಶನ ಇಂದು (ಜನವರಿ 31) ಶುರುವಾಗಿದೆ. ಮೊದಲ ದಿನವಾದ ಶುಕ್ರವಾರ ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾತನಾಡಿದರು. ಸರ್ಕಾರದ ಸಾಧನೆಗಳ ಬಗ್ಗೆ ಸುದೀರ್ಘ ಬಾಷಣ ಮಾಡಿದ ಅವರು, ಸರ್ಕಾರ ಜಾರಿಗೊಳಿಸಿದ ವಿವಿಧ ಉಪಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿಯವರ ಭಾಷಣ ಮುಗಿದ ಬಳಿಕ ಹೊರ ಬಂದ ಕಾಂಗ್ರೆಸ್ ನಾಯಕರನ್ನು ವಿಶೇಷವಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಮಾಧ್ಯಮ ಪ್ರತಿನಿಧಿಗಳು, ರಾಷ್ಡ್ರಪತಿ ಭಾಷಣದ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸೋನಿಯಾ ಗಾಂಧಿ, ಪೂರ್ ಥಿಂಗ್ ಎಂದು ಪ್ರತಿಕ್ರಿಯಿಸಿದರು. ರಾಹುಲ್ ಗಾಂಧಿ ನೋ ಕಾಮೆಂಟ್ಸ್ ಎಂದು ಹೇಳಿದರು. ಸೋನಿಯಾ ಗಾಂಧಿ ಅವರ ಹೇಳಿಕೆಯನ್ನು ಬಿಜೆಪಿ ನಾಯಕರು ತೀವ್ರವಾಗಿ ಟೀಕಿಸಿ ಖಂಡಿಸಿದರು.
ಮಾಹಿತಿ ಅಪ್ಡೇಟ್ ಆಗುತ್ತಿದೆ
Published by HT Digital Cont...
Click here to read full article from source
To read the full article or to get the complete feed from this publication, please
Contact Us.