Bangalore, ಜನವರಿ 30 -- ನಿರ್ಮಲಾ ಸೀತಾರಾಮನ್‌ ಇದೇ ಫೆಬ್ರವರಿ 1ರಂದು ಮಂಡಿಸಲಿರುವ ಬಜೆಟ್‌ ಕುರಿತಂತೆ ಜನ ಸಾಮಾನ್ಯರಲ್ಲಿ ಸಾಕಷ್ಟು ನಿರೀಕ್ಷೆಗಳು ಇವೆ. ವೇತನ ಪಡೆಯುವ ತೆರಿಗೆ ಪಾವತಿದಾರರು ಕೂಡ ಬಜೆಟ್‌ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ವೇತನ ಪಡೆಯುವ ತೆರಿಗೆ ಪಾವತಿದಾರರು ಕೇಂದ್ರ ಸರಕಾರಕ್ಕೆ ನೀಡುವ ತೆರಿಗೆ ಕೊಡುಗೆಗಳು ತುಸು ಹೆಚ್ಚೇ ಎನ್ನಬಹುದು. ಭಾರತದಲ್ಲಿ ಅತ್ಯುತ್ತಮ ಗಳಿಕೆ ಮಾಡುವ ಸಣ್ಣ ವ್ಯಾಪಾರಿಗಳು ಯಾವುದೇ ತೆರಿಗೆ ಪಾವತಿಸುತ್ತಿಲ್ಲ. ಬೀದಿಬದಿಯಲ್ಲಿ ಪಾನಿಪುರಿ, ಬೇಲ್‌ಪುರಿ ಮಾರಾಟ ಮಾಡುವವರ ಆದಾಯ ವರ್ಷಕ್ಕೆ ಹತ್ತು ಹಲವು ಲಕ್ಷ ರೂಪಾಯಿ ಇರುತ್ತದೆ. ಆದರೆ, ಇವರು ಜಿಎಸ್‌ಟಿ ನೋಂದಣಿ ಮಾಡದೆ ಇರಬಹುದು. ಯಾವುದೇ ತೆರಿಗೆ ಪಾವತಿಸದೆ ತಮ್ಮ ಸಂಪತ್ತನ್ನು ಹಲವು ಪಟ್ಟು ಹೆಚ್ಚಿಸಿಕೊಳ್ಳುತ್ತ ಹೋಗಬಹುದು. ಆದರೆ, ವೇತನ ಪಡೆಯುವ ಉದ್ಯೋಗಿಗಳು ತಮ್ಮ ವೇತನ ತುಸು ತುಸು ಹೆಚ್ಚಾದಂತೆ ಸರಕಾರಕ್ಕೆ ಆದಾಯ ತೆರಿಗೆ ಹೆಚ್ಚು ಹೆಚ್ಚು ಕಟ್ಟುತ್ತಾ ಹೋಗುತ್ತಾರೆ. ಹದಿನೈದು ಲಕ್ಷಕ್ಕಿಂತ ಹೆಚ್ಚು ವೇತನ ಪಡ...