ಭಾರತ, ಫೆಬ್ರವರಿ 1 -- ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಫೆಬ್ರುವರಿ 1) ಸಂಸತ್ತಿನಲ್ಲಿ 8ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸುತ್ತಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಮುಖ್ಯವಾಗಿ 10 ಆದ್ಯತಾ ವಲಯಗಳ ಮೇಲೆ ಗಮನ ಕೇಂದ್ರೀಕರಿಸಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇಂದಿನ ಬಜೆಟ್‌ನಲ್ಲಿ ಕುಡಿಯುವ ನೀರು, ಪ್ರವಾಸಿ ತಾಣಗಳಿಗೆ ಉತ್ತೇಜನ, ನೈಮರ್ಲ್ಯಕ್ಕೆ ಒತ್ತು ನೀಡಿರುವುದು ಸೇರಿ ಯಾವೆಲ್ಲಾ ಪ್ರಮುಖ ವಿಚಾರಗಳ ಮೇಲೆ ಗಮನ ನೀಡಲಾಗಿದೆ ನೋಡಿ.

ಜಲ ಜೀವನ್ ಯೋಜನೆಯನ್ನು 2028ರವರೆಗೆ ವಿಸ್ತರಣೆ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಶೇ 100ರಷ್ಟು ಕುಡಿಯುವ ನೀರು ಪೂರೈಕೆ ಗುರಿ ಹೊಂದಲಾಗಿದೆ. ಶೇ 80ರಷ್ಟು ಗ್ರಾಮೀಣ ಭಾಗ ಹೊಂದಿರುವ ಭಾರತ, ಗ್ರಾಮೀಣ ಭಾಗದಲ್ಲಿ ನಲ್ಲಿ ನೀರು ಯೋಜನೆ.

ನಗರಾಭಿವೃದ್ಧಿಗೆ 1ಲಕ್ಷ ಕೋಟಿ ರೂ ವಿಶೇಷ ಅನುದಾನ. ವಿಕಸಿತ ಭಾರತಕ್ಕೆ ನ್ಯೂಕ್ಲಿಯರ್ ಎನರ್ಜಿ ಮಿಷನ್ ಯೋಜನೆ ಅನುಷ್ಠಾನ. 2047ರ ವೇಳೆಗೆ ಅಣು ವಿದ್ಯುತ್ ಉತ್ಪಾದನೆ ಹೆಚ್ಚಳ. ನಗರ ಪ್ರದ...