ಭಾರತ, ಫೆಬ್ರವರಿ 1 -- Budget 2025 Income Tax: ಭಾರತದ ಮಧ್ಯಮ ವರ್ಗ ಬಹಳ ಕಾತರದಿಂದ ಕಾಯುತ್ತಿದ್ದ ಮಹತ್ವದ ತೆರಿಗೆ ವಿನಾಯಿತಿ ಘೋಷಣೆಯಾಗಿದೆ. ವಾರ್ಷಿಕ 12 ಲಕ್ಷ ರೂ ತನಕ ಆದಾಯದವರು ಇನ್ನು ತೆರಿಗೆ ಕಟ್ಟಬೇಕಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದರು. ಈ ಘೋಷಣೆ ಬೆನ್ನಿಗೆ ಸದಸ್ಯರು ಮೇಜು ತಟ್ಟಿ ಖುಷಿ ವ್ಯಕ್ತಪಡಿಸಿದರು.

ಮಧ್ಯಮ ವರ್ಗಕ್ಕೆ ಖುಷಿ ಕೊಡುವ ಸುದ್ದಿಯನ್ನು ಪ್ರಕಟಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, "ಮಧ್ಯಮ ವರ್ಗವು ದೇಶದ ಅರ್ಥ ವ್ಯವಸ್ಥೆಗೆ ಶಕ್ತಿ ತುಂಬುವಂತಹ ಸಾಮರ್ಥ್ಯವನ್ನು ಹೊಂದಿರುವಂಥದ್ದು. ಅವರ ಕೊಡುಗೆಯನ್ನು ಗುರುತಿಸಿ, ನಾವು ನಿಯತಕಾಲಿಕವಾಗಿ ತೆರಿಗೆ ಹೊರೆಗಳನ್ನು ಕಡಿಮೆ ಮಾಡಿದ್ದೇವೆ. ವಾರ್ಷಿಕವಾಗಿ 12 ಲಕ್ಷ ರೂಪಾಯಿ ತನಕದ ಆದಾಯದ ಇರುವಂಥವರಿಗೆ ಯಾವುದೇ ಆದಾಯ ತೆರಿಗೆ ಇರುವುದಿಲ್ಲ ಎಂದು ಹೇಳಿದರು.

ಹೊಸ ತೆರಿಗೆ ಪದ್ಧತಿಯನ್ನು ಅನುಸರಿಸುವ ತೆರಿಗೆದಾರರ ವಾರ್ಷಿಕ ಆದಾಯ 12 ಲಕ್ಷ ರೂಪಾಯಿ ತನಕ ಇದ್ದರೆ ಅದಕ್ಕೆ ತೆರಿಗೆ ಇಲ್ಲ...