Bangalore, ಫೆಬ್ರವರಿ 1 -- Union Budget 2025: ಕೇಂದ್ರದಲ್ಲಿ ಕರ್ನಾಟಕದವರೇ ಹಲವರು ಸಚಿವರಿದ್ದಾರೆ. ಹಿರಿಯರೂ ಇದ್ದಾರೆ. ಬಿಜೆಪಿಯಿಂದಲೇ ಹೆಚ್ಚಿನ ಸಂಸದರು ಗೆದ್ದಿದ್ದಾರೆ. ಹೀಗಿದ್ದರೂ ಕರ್ನಾಟಕದಲ್ಲಿ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ನ್ಯಾಯವೇ ಸಿಕ್ಕಿಲ್ಲ. ನಮ್ಮ ರಾಜ್ಯದಿಂದಲೂ ಬಜೆಟ್‌ ಪೂರ್ವಭಾವಿ ಸಭೆಗಳಿಗೆ ಸಚಿವರು ಹೋಗಿದ್ದರು. ಹಲವಾರು ಪ್ರಸ್ತಾವನೆಗಳನ್ನು ಸಲ್ಲಿಸಲಾಗಿತ್ತು. ಕೇಳಿದ್ದನ್ನು ಒಂದನ್ನೂ ಬಜೆಟ್‌ನಲ್ಲಿ ಸೇರಿಸಿಲ್ಲ. ಚುನಾವಣೆಗೆ ಅಣಿಯಾಗುತ್ತಿರುವ ಬಿಹಾರಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆಯೇ ವಿನಃ ದೇಶದಲ್ಲೇ ಅತಿಹೆಚ್ಚು ತೆರಿಗೆ ನೀಡುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕಕ್ಕೆ ಏನನ್ನೂ ಕೊಟ್ಟಿಲ್ಲ. ಮೋದಿ ಹಾಗೂ ನಿರ್ಮಲಾ ಸೀತಾರಾಮನ್‌ ಮತ್ತೊಮ್ಮೆ ಕರ್ನಾಟಕಕ್ಕೆ ಖಾಲಿ ಚೊಂಬನ್ನು ಕೊಟ್ಟಿದ್ದಾರೆ.

ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಬಜೆಟ್‌ ಕುರಿತು ನೇರಾನೇರ ವಾಗ್ದಾಳಿ ಮಾಡಿದ್ದು ಹೀಗೆ. ಮೈಸೂರು ಪ್ರವಾಸದಲ್ಲಿರುವ ಅವರು ತಮ್ಮ ನಿವಾಸದಲ್ಲಿಯೇ ಪತ್ರಿಕಾಗೋಷ್ಠಿ ಉದ...