ಭಾರತ, ಫೆಬ್ರವರಿ 25 -- Maha Shiavaratri 2025: ಶಿವನನ್ನು ಆರಾಧಿಸುವ ಮಹಾ ಶಿವರಾತ್ರಿ ಬಂದೇ ಬಿಡ್ತು. ದೇಶಾದ್ಯಂತ ಶಿವನ ಭಕ್ತರು ನಾಳೆ (ಫೆಬ್ರವರಿ 26, ಬುಧವಾರ) ಮಹಾ ಶಿವರಾತ್ರಿಯನ್ನು ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸುತ್ತಾರೆ. ಶಿವನ ದೇವಾಲಯಗಳಲ್ಲೂ ವಿಶೇಷ ಪೂಜೆಗಳು ನಡೆಯುತ್ತವೆ. ಇನ್ನ ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಈಶ ಯೋಗ ಕೇಂದ್ರದಲ್ಲಿ 'ಒಂದು ದೈವಿಕ ರಾತ್ರಿ' ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮ ನಾಳೆ (ಫೆ.26) ಸಂಜೆ 6 ಗಂಟೆಯಿಂದ ಮರು ದಿನ ಬೆಳಗ್ಗೆ 6 ಗಂಟೆಯವರಿಗೆ ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ವರದಿಯಾಗಿದೆ.

'ಒಂದು ದೈವಿಕ ರಾತ್ರಿ' ಎಂಬ ವಿಶೇಷ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಎಂದು ಈಶ ಫೌಂಡೇಶನ್ ನ ಸದ್ಗುರು ಬಾಬಾ ಜಗ್ಗಿ ವಾಸುದೇವ್ ಭಕ್ತರಲ್ಲಿ ಮನವಿ ಮಾಡ...