ಭಾರತ, ಮೇ 13 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮೇ 9ರ ಸಂಚಿಕೆಯಲ್ಲಿ ಸುಂದರ-ಧನಲಕ್ಷ್ಮೀ ಮಗಳು ಐಶು ಹೇಳಿದ ಮಾತಿಗೆ ಕರಗುವ ಶ್ರಾವಣಿ ಮನೆಯಿಂದ ಹೊರಗಡೆ ಹೋಗಿ ಸುಂದರನಿಗೆ ಕಾಲ್‌ ಮಾಡುತ್ತಾಳೆ. ʼಐಶು ಪುಟ್ಟನನ್ನು ಬಿಟ್ಟು ಇರುವುದು ನನಗೂ ಕಷ್ಟವಾಗುತ್ತದೆ. ಅದಕ್ಕೆ ನಾನೊಂದು ತೀರ್ಮಾನಕ್ಕೆ ಬಂದಿದ್ದೇನೆ, ನೀವು ಮನೆ ಬಿಟ್ಟು ಹೋಗೋದು ಬೇಕಾಗಿಲ್ಲ. ಆದರೆ ನೀವು ಇದೇ ಮನೆಯಲ್ಲಿ ಇದ್ದುಕೊಂಡು ಹೊರಗಡೆ ದುಡಿಯಲು ಹೋಗಿ ನಿಮ್ಮ ಹೆಂಡತಿ, ಮಗಳು ಹಾಗೂ ತಾಯಿಯನ್ನು ಸಲಹಬೇಕು. ಜೊತೆಗೆ ವಾರಾಂತ್ಯಗಳಲ್ಲಿ ನೀವು ಹಾಗೂ ನಿಮ್ಮ ತಾಯಿ ಮನೆಕೆಲಸಕ್ಕೆ ಸಹಾಯ ಮಾಡಬೇಕು. ಈ ಷರತ್ತಿಗೆ ನೀವು ಒಪ್ಪಿದ್ರೆ ಮಾತ್ರ ಮನೆಯಲ್ಲಿ ಇರಬಹುದು' ಎಂದು ಶ್ರಾವಣಿ ಹೇಳುತ್ತಾಳೆ. ಮನೆಯಲ್ಲಿ ಇರೋಕೆ ಒಪ್ಪಿದ್ದೆ ಹೆಚ್ಚು ಅಂತ ಶ್ರಾವಣಿಯ ಷರತ್ತಿಗೆ ಒಪ್ಪುವ ಸುಂದರ, ಮನೆಯವರೆಲ್ಲರ ಎದುರು ನಾಟಕ ಮಾಡುತ್ತಾನೆ. ನೀವೆಲ್ಲರೂ ಹೇಳಿದ್ದಕ್ಕೆ ನಾನು ಈ ಮನೆಯಲ್ಲಿ ಇರಲು ಒಪ್ಪಿದ್ದು ಎಂದು ಹೇಳೋದು ಮಾತ್ರವಲ್ಲ, ತಾನು ದುಡಿಯಲು ಹೋಗುತ್ತೇನೆ ಎಂದು ಮನೆಯವರ ಮುಂದೆ...