ಭಾರತ, ಏಪ್ರಿಲ್ 6 -- ಬಟ್ಟೆ ವ್ಯಾಪಾರ ಮಾಡುವ ಸೋಗಿನಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಸೇಕಾ ಗಿಸಲೈನ್ ಟಾನೊ ಎಂಬ 33 ವರ್ಷದ ವ್ಯಕ್ತಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಐವರಿ ಕೋಸ್ಟ್‌ ಪ್ರದೇಶದ ಟಾನೊ, 2022ರಲ್ಲಿ ಬೆಂಗಳೂರಿಗೆ ಆಗಮಿಸಿ ಹೊಂಗಸಂದ್ರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಬಟ್ಟೆ ವ್ಯಾಪಾರ ಮಾಡುವ ನೆಪದಲ್ಲಿ ಪರಿಚಯಸ್ಥರಿಗೆ ಮಾತ್ರ ಡ್ರಗ್ಸ್ ಮಾರಾಟ ಮಾಡುತ್ತಿದ್ದ.

ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಈತನ ಮನೆಯ ಮೇಲೆ ದಾಳಿ ಮಾಡಿ ಬಂಧಿಸಲಾಗಿದೆ. ಟಾನೊ ಮನೆಯಲ್ಲಿ 2 ಕೋಟಿ ರೂಪಾಯಿ ಮೌಲ್ಯದ 2. 24 ಕೆಜಿ ತೂಕದ ಎಂಡಿಎಂಎ ಮಾತ್ರೆಗಳು, ಮೊಬೈಲ್ ಹಾಗೂ ತೂಕದ ಯಂತ್ರವೊಂದನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ಸೇಕಾ ಗಿಸಲೈನ್ ಟಾನೋ ಮುಂಬೈನಲ್ಲೂ ಕೆಲವು ತಿಂಗಳು ನೆಲೆಸಿದ್ದ. ಅಲ್ಲಿಯೂ ಬಟ್ಟೆ ವ್ಯಾಪಾರಿ ಎಂದು ಹೇಳಿಕೊಳ್ಳುತ್ತಾ ಡ್ರಗ್ಸ್ ದಂಧೆ ನಡೆಸುತ್ತಿದ್ದ.

ಇದನ್ನೂ ಓದಿ: ಡೇವಿಡ್ ವಾರ್ನರ್​ ಫಿಕ್ಸಿಂಗ್ ಮಾಡ್ತಿದ್ರು, ನಾನೇ ಆತನನ್ನು SRHನಿಂದ...