ಭಾರತ, ಮಾರ್ಚ್ 1 -- ಕೆಲಸದ ಒತ್ತಡ, ಸಮಯದ ಅಭಾವ ಮತ್ತು ಕೆಲಸದ ಗುರಿಗಳನ್ನು ಹೊಂದಬೇಕಾಗಿರುವುದರಿಂದ ಇತ್ತೀಚಿನ ದಿನಗಳಲ್ಲಿ ಊಟವನ್ನು ಬಿಡುವುದು ಸಾಮಾನ್ಯವಾಗಿದೆ. ಆದರೆ, ಈ ರೀತಿಯ ಅಭ್ಯಾಸವು ದೀರ್ಘಕಾಲಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇದರಿಂದ ಹೃದ್ರೋಗ ಅಪಾಯ ಹೆಚ್ಚಾಗುವ ಸಾಧ್ಯತೆಯಿದೆ. ಹೃದಯವು ನಮ್ಮ ದೇಹದ ಮುಖ್ಯ ಅಂಗವಾಗಿದ್ದು, ಅದರ ಆರೋಗ್ಯವನ್ನು ಕಾಪಾಡುವುದು ಬಹಳ ಮುಖ್ಯ. ಏಕೆಂದರೆ, ಹೃದ್ರೋಗವು ಜೀವನದ ಗುಣಮಟ್ಟವನ್ನು ಹಾಳುಮಾಡುತ್ತವೆ. ಹೃದ್ರೋಗದ ಅಪಾಯ ಹೆಚ್ಚಲು ಕಾರಣವೇನು? ಇಲ್ಲಿದೆ ಮಾಹಿತಿ.

ರಕ್ತದಲ್ಲಿನ ಸಕ್ಕರೆ ಮಟ್ಟದ ಅಸ್ಥಿರತೆ: ಊಟ ಬಿಡುವುದರಿಂದ ದೇಹದಲ್ಲಿ ಸಕ್ಕರೆ ಮಟ್ಟದಲ್ಲಿ ಏರಿಳಿತ ಸಂಭವಿಸುತ್ತದೆ. ಇದರಿಂದ ಇನ್ಸುಲಿನ್ ಪ್ರತಿಕ್ರಿಯೆ ದುರ್ಬಲಗೊಳ್ಳಬಹುದು ಮತ್ತು ದೀರ್ಘಕಾಲದಲ್ಲಿ ಹೃದ್ರೋಗದ ಅಪಾಯ ಹೆಚ್ಚಿಸುತ್ತದೆ.

ಇದನ್ನೂ ಓದಿ: ಹೃದ್ರೋಗಗಳ ಭಯ ಬಿಡಿ, ಹೃದಯದ ಆರೋಗ್ಯ ಸುಧಾರಿಸಲು ಪ್ರತಿದಿನ 10 ನಿಮಿಷಗಳ ಕಾಲ ಮನೆಯಲ್ಲೇ ಈ ಸರಳ ವ್ಯಾಯಾಮ ಮಾಡಿ

ದೇಹದಲ್ಲಿ ಕೊಬ್ಬಿನ ಸಂಗ್ರಹ: ಊಟ ಬಿಟ...