Bengaluru, ಫೆಬ್ರವರಿ 3 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶನಿವಾರ ಫೆಬ್ರುವರಿ 2ರ ಸಂಚಿಕೆಯಲ್ಲಿ ಭಾಗ್ಯಾ ತನ್ನದಲ್ಲದ ತಪ್ಪನ್ನು ಒಪ್ಪಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸತ್ಯ ಏನೆಂದು ಗೊತ್ತಾಗದೇ ರಿಸೈನ್ ಮಾಡುವುದಿಲ್ಲ, ಹೋಟೆಲ್ ಕೆಲಸ ಬಿಟ್ಟು ಎಲ್ಲೂ ಹೋಗುವುದಿಲ್ಲ ಎಂದು ಹೇಳಿಕೊಂಡಿದ್ದ ಭಾಗ್ಯಾಗೆ, ಕನ್ನಿಕಾ ಬೆದರಿಸಿದ್ದಾಳೆ. ನೀನು ಕೆಲಸ ಬಿಟ್ಟು ಹೊರಹೋಗದಿದ್ದರೆ, ನಿನ್ನ ಜೊತೆಗಿರುವವರು ಎಲ್ಲರನ್ನೂ ಕೆಲಸದಿಂದ ತೆಗೆಯುತ್ತೇನೆ ಎಂದು ಹೆದರಿಸಿದ್ದಾಳೆ. ಅಲ್ಲಿಯವರೆಗೆ ಕೆಲಸ ಬಿಡುವುದಿಲ್ಲ ಎಂದಿದ್ದ ಭಾಗ್ಯ, ತಾನು ಮಾಡದೇ ಇರುವ ತಪ್ಪನ್ನು ಒಪ್ಪಿಕೊಂಡು ಹೊರಹೋಗಲು ಸಿದ್ಧಳಾಗುತ್ತಾಳೆ. ಕನ್ನಿಕಾ ಕೂಡ, ಯಾವುದೇ ಕಿರಿಕಿರಿ ಮಾಡದೇ, ಸುಮ್ಮನೇ ಕೆಲಸ ಬಿಟ್ಟು ಹೋಗು, ಇಲ್ಲವಾದರೆ ನಿನ್ನ ಸಹೋದ್ಯೋಗಿಗಳಿಗೂ ತೊಂದರೆ ಮಾಡುವುದಾಗಿ ಹೇಳುತ್ತಾಳೆ.

ಹೋಟೆಲ್‌ನ ಹೊರಗಡೆ ಬಂದ ಕನ್ನಿಕಾ, ಮಾಧ್ಯಮದವರನ್ನು ಉದ್ದೇಶಿಸಿ, ನಾನು ಆಗಿರುವ ತಪ್ಪಿಗೆ ಕ್ಷಮೆ ಕೋರುತ್ತೇನೆ, ನಮ್ಮಿಂದ ತಪ್ಪಾಗಿದೆ, ಹೀಗಾಗಿ ಆ...