ಭಾರತ, ಮಾರ್ಚ್ 19 -- ಬೆಂಗಳೂರು: ಡಿಜಿಟಲೀಕರಣ ಹಾಗೂ ಕಾರ್ಯಕ್ಷಮತೆ ಹೆಚ್ಚಿಸುವತ್ತ ಕೆನರಾ ಬ್ಯಾಂಕ್‌ ಮಹತ್ವದ ಹೆಜ್ಜೆಯಿಟ್ಟಿದ್ದು ಭಾರತದಲ್ಲಿ ಮೊದಲ ಬಾರಿಗೆ ಆನ್‌ಲೈನ್‌ ಡಿಜಿಟಲ್‌ ಬ್ಯಾಲೆನ್ಸ್‌ ಕನ್ಫರ್ಮೆಶನ್‌ ಸರ್ಟಿಫಿಕೆಟ್‌ ವ್ಯವಸ್ಥೆಯನ್ನು ಪರಿಚಯಿಸಿದೆ. ಭಾರತದಲ್ಲಿ ಈ ಯೋಜನೆಯನ್ನು ಆರಂಭಿಸಿದ ಮೊದಲ ಬ್ಯಾಂಕ್‌ ಎಂಬ ಹೆಗ್ಗಳಿಕೆಯನ್ನ ಕೆನರಾ ಬ್ಯಾಂಕ್‌ ಪಡೆದುಕೊಂಡಿದೆ.

ಕೆನರಾ ಬ್ಯಾಂಕ್‌ನ ಈ ವಿನೂತನ ಪ್ರಯತ್ನಕ್ಕೆ ಪಿಎಸ್‌ಬಿ ಅಲೈಯನ್ಸ್‌ ಪ್ರೈವೆಟ್‌ ಲಿಮಿಟೆಡ್‌ ಪೋರ್ಟಲ್‌ ಸಾಥ್‌ ನೀಡಿದೆ. ಈ ಹೊಸ ವ್ಯವಸ್ಥೆ ಆಡಿಟ್‌ ಪ್ರಕ್ರಿಯೆಯನ್ನು ಸರಳೀಕರಿಸುವುದರ ಜೊತೆಗೆ ಶ್ರಮವನ್ನು ತಗ್ಗಿಸಿ ಪರಿಣಾಮಕಾರಿ, ತ್ವರಿತ ಫಲಿತಾಂಶವನ್ನು ನೀಡಲಿದೆ. ಈ ಮೊದಲು ಲೆಕ್ಕ ಪರಿಶೋಧನೆಯ ಸಮಯದಲ್ಲಿ ಆಡಿಟರ್‌ಗಳು ಅಧೀಕೃತ ಪತ್ರದ ಜೊತೆಗೆ ಬ್ಯಾಂಕ್‌ಗಳಿಗೆ ಭೇಟಿ ನೀಡಿ ಬ್ಯಾನೆಲ್ಸ್‌ ಕನ್ಫರ್ಮೇಶನ್‌ ಸರ್ಟಿಫಿಕೇಟ್‌ ಪಡೆದುಕೊಳ್ಳಬೇಕಿತ್ತು. ಆದರೆ ಈಗ ಹೊಸ ಡಿಜಿಟಲ್‌ ವ್ಯವಸ್ಥೆಯ ಜೊತೆಗೆ ಆನ್‌ಲೈನ್‌ ಪೋರ್ಟಲ್‌ ಮೂಲಕವೇ ಪ್ರಮಾಣಪತ್ರವನ್ನ...