ಭಾರತ, ಫೆಬ್ರವರಿ 8 -- ಪ್ರೀತಿಯಲ್ಲಿ ಬೀಳುವುದು ಸುಲಭ, ಆದರೆ ದೀರ್ಘಕಾಲ ಪ್ರೀತಿಯನ್ನು ಉಳಿಸಿಕೊಳ್ಳುವುದು ಖಂಡಿತ ಸುಲಭವಲ್ಲ. ಅದರಲ್ಲೂ ನೀವು ಕೆಟ್ಟ ಸಂಬಂಧವನ್ನು ಹೊಂದಿದ್ದರೆ ಅದರಿಂದ ಬೇಗನೆ ಹೊರ ಬರಬೇಕು, ಇಲ್ಲ ಅಂದರೆ ಬದುಕು ನರಕವಾಗಬಹುದು. ಟಾಕ್ಸಿಕ್ ರಿಲೇಷನ್‌ಶಿಪ್‌ನಿಂದ ಹೊರ ಬಂದರೂ, ಇದರಿಂದ ಚೇತರಿಸಿಕೊಳ್ಳುವುದು ಕಷ್ಟ.

ವಿಷಕಾರಿ ಸಂಬಂಧವು ನಮ್ಮನ್ನು ನಿರಾಸೆಗೆ ತಳ್ಳಬಹುದು. ಗೊಂದಲಕ್ಕೀಡು ಮಾಡಬಹುದು. ಪ್ರಪಂಚವೇ ಮುಳುಗಿದಂತಹ ಭಾವನೆ ಮೂಡುವಂತೆ ಮಾಡಬಹುದು. ಆ ಕಾರಣದಿಂದಾಗಿ ಈ ನೋವು ಮನದಲ್ಲಿ ಮಡಗಟ್ಟಿ ನಮ್ಮನ್ನು ಹತಾಶೆಗೆ ತಳ್ಳಬಹುದು. ಇದು ಮುಂದಿನ ಹಾದಿಯನ್ನು ಕಂಡುಕೊಳ್ಳಲು ಕಷ್ಟವಾಗುವಂತೆ ಮಾಡಬಹುದು. ಆದರೆ ಇದಕ್ಕೆಲ್ಲಾ ಪರಿಹಾರ ಧ್ಯಾನ, ಕೆಲವು ನಿರ್ದಿಷ್ಟ ಧ್ಯಾನದ ಮಾರ್ಗಗಳು ಕೆಟ್ಟ ಸಂಬಂಧದಿಂದ ಹೊರ ಬಂದ ನಂತರ ಚೇತರಿಸಿಕೊಳ್ಳಲು ದಾರಿಯಾಗಬಹುದು ಎನ್ನುತ್ತಾರೆ ತಜ್ಞರು. ಇದು ಬದುಕಿಗೆ ಹೊಸ ಭರವಸೆ ನೀಡುತ್ತದೆ.

ಕೆಟ್ಟ ಅಥವಾ ವಿಷಕಾರಿ ಸಂಬಂಧಗಳು ಹೃದಯಾಘಾತಕ್ಕಿಂತಲೂ ಹೆಚ್ಚಿನ ನೋವನ್ನು ಉಂಟು ಮಾಡುತ...