नई दिल्ली, ಮಾರ್ಚ್ 21 -- ವಿಶ್ವದ ಅತ್ಯಂತ ವರ್ಣರಂಜಿತ ಲೀಗ್ ಐಪಿಎಲ್ 18ನೇ ಆವೃತ್ತಿಯು ಮಾರ್ಚ್ 22 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪ್ರಾರಂಭವಾಗಲಿದೆ. ಕೆಕೆಆರ್ ಮತ್ತು ಆರ್​ಸಿಬಿ ಪಂದ್ಯವು ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಪ್ರಾರಂಭವಾಗಲಿದೆ. ಆದರೆ ಈ ಪಂದ್ಯದ ಮೇಲೆ ಅಡ್ಡಿಪಡಿಸಿದೆ. ಪ್ರಸ್ತುತ ಕೋಲ್ಕತ್ತಾದ ಕೆಲವು ಭಾಗಗಳಲ್ಲಿ ಆರೆಂಜ್ ಅಲರ್ಟ್ ಜಾರಿಯಲ್ಲಿದ್ದು, ಪಂದ್ಯವನ್ನು ರದ್ದುಗೊಳಿಸಬಹುದು ಎಂಬ ವರದಿಗಳಿವೆ. ಈ ಮಧ್ಯೆ ಪಿಚ್ ವರದಿ ಹೇಗಿದೆ, ಹೆಡ್​ ಟು ಹೆಡ್ ರೆಕಾರ್ಡ್ ವಿವರ ಇಂತಿದೆ.

ಐತಿಹಾಸಿಕ ಮೈದಾನದ ಪಿಚ್ ಬ್ಯಾಟರ್​​​ಗಳಿಗೆ ಅನುಕೂಲಕರವೆಂದು ಪರಿಗಣಿಸಲಾಗಿದೆ. ಆದರೆ ಆರಂಭದಲ್ಲಿ ಬೌಲರ್​​ಗಳು ಕೊಂಚ ನೆರವು ಪಡೆಯಲಿದ್ದಾರೆ. ಹೆಚ್ಚಿನ ತಂಡಗಳು ಟಾಸ್ ಗೆದ್ದ ನಂತರ ಮೊದಲು ಬೌಲಿಂಗ್ ಆಯ್ಕೆ ಮಾಡಿರುವುದೇ ಅಧಿಕ. ಏಕೆಂದರೆ ಈ ಮೈದಾನದಲ್ಲಿ ರನ್ ಚೇಸ್ ಸಾಕಷ್ಟು ಸುಲಭ. ಈ ರನ್ ಚೇಸ್​ನಲ್ಲಿ ಇಬ್ಬನಿ ಪ್ರಮುಖ ...