ಭಾರತ, ಮಾರ್ಚ್ 12 -- ಕಳೆದ ವರ್ಷ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್​ ಸಾಕಷ್ಟು ಏರಿಳಿತ ಕಂಡರು. 2024ರ ಫೆಬ್ರವರಿಯಲ್ಲಿ ಟೆಸ್ಟ್​ ತಂಡದಿಂದ ಹೊರಬಿದ್ದರು. ಇದಾದ ಬಳಿಕ ಅಯ್ಯರ್ ಬಿಸಿಸಿಐ ಕೇಂದ್ರ ಒಪ್ಪಂದವನ್ನೂ ರದ್ದುಪಡಿಸಲಾಗಿತ್ತು. ಆದಾಗ್ಯೂ, ಕಠಿಣ ಪರಿಶ್ರಮ ಹಾಕಿದ ಅಯ್ಯರ್, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಟೂರ್ನಿಯಲ್ಲಿ ಆಡಿರುವ 5 ಪಂದ್ಯಗಳಲ್ಲಿ 48.60ರ ಸರಾಸರಿಯಲ್ಲಿ 243 ರನ್ ಗಳಿಸಿದ ಅವರು, ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಯ್ಯರ್ ಅವರನ್ನು 'ಸೈಲೆಂಟ್ ಹೀರೋ' ಎಂದು ರೋಹಿತ್ ಶರ್ಮಾ ಕರೆಯುವ ಮೂಲಕ ಅವರ ಸಾಧನೆ ಕೊಂಡಾಡಿದರು.

ಅಯ್ಯರ್ ತಮ್ಮ ನಾಯಕತ್ವದ ಕೌಶಲ್ಯವನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಅಯ್ಯರ್ ನಾಯಕತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್ (KKR) 2024ರ ಐಪಿಎಲ್​ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಇದು ಕೆಕೆಆರ್​ನ 10 ವರ್ಷಗಳ ಟ್ರೋಫಿ ಬರ ಕೊನೆಗೊಳಿಸಿತು. ಆದಾಗ್ಯೂ, ಕೆಕೆಆರ್ ಪ್ರ...