ಕೋಲ್ಕತ್ತಾ, ಮೇ 6 -- ಐಪಿಎಲ್ 2025ರ 57ನೇ ಪಂದ್ಯದಲ್ಲಿ ಆತಿಥೇಯ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಚೆನ್ನೈ ಸೂಪರ್ ಕಿಂಗ್ಸ್ (KKR vs CSK) ಸವಾಲು ಹಾಕಲು ಸಜ್ಜಾಗಿದೆ. ಪಂದ್ಯವು ಕೆಕೆಆರ್‌ ತವರು ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಡೆಯಲಿದೆ. ಸಿಎಸ್‌ಕೆ ತಂಡ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವುದರಿಂದ ಈ ಪಂದ್ಯದಲ್ಲಿ ಸೋಲು ಗೆಲುವು ತಂಡಕ್ಕೆ ದೊಡ್ಡ ವಿಷಯವೇನೂ ಆಗುವುದಿಲ್ಲ. ಆದರೆ ಪ್ರತಿಷ್ಠೆಗಾಗಿ ಗೆಲ್ಲಬೇಕಾಗಿದೆ. ಅತ್ತ ಕೆಕೆಆರ್‌ ತಂಡವು ಪ್ಲೇಆಫ್‌ ಪ್ರವೇಶಿಸಲು ಮಾಡು ಇಲ್ಲವೇ ಮಡಿ ಎಂದೇ ಹೋರಾಡಬೇಕಿದೆ. ಒಂದು ಪಂದ್ಯದಲ್ಲಿ ಸೋತರೂ, ತಂಡ ಟೂರ್ನಿಯಿಂದ ಹೊರಬಿದ್ದಂತೆ.

ಪಂದ್ಯವು ಕೋಲ್ಕತ್ತಾದಲ್ಲಿ ನಡೆಯುವುದರಿಂದ ಪಂದ್ಯಕ್ಕೆ ಸಂಬಂಧಿಸಿದಂತೆ ಪಿಚ್‌ ಹಾಗೂ ಹವಾಮಾನ ವರದಿ ಇಲ್ಲಿದೆ.

ಈಡನ್ ಗಾರ್ಡನ್ಸ್‌ನ ಪಿಚ್‌ನಲ್ಲಿ ಚೆಂಡು ಹಳೆಯದಾದ ನಂತರ ವೇಗದ ಬೌಲರ್‌ಗಳ ಜೊತೆಗೆ ಸ್ಪಿನ್ನರ್‌ಗಳಿಗೂ ನೆರವಾಗುತ್ತಿದೆ. ಇದೇ ಮೈದಾನದಲ್ಲಿ 2024ರಲ್ಲಿ ಪಂಜಾಬ್ ಕಿಂಗ್ಸ್ ತಂಡವು ಕೆಕೆಆರ್‌ ವಿರುದ್ಧ 262 ರನ್‌ ಗಳಿಸಿ ಐಪಿಎಲ...