ಭಾರತ, ಮಾರ್ಚ್ 31 -- ಮುಂಬೈ ಇಂಡಿಯನ್ಸ್‌ ತಂಡವು ಐಪಿಎಲ್‌ 16ನೇ ಆವೃತ್ತಿಯಲ್ಲಿ ಮೊದಲ ಗೆಲುವು ದಾಖಲಿಸಿದೆ. ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಹಾರ್ದಿಕ್‌ ಪಾಂಡ್ಯ ಬಳಗವು, ಕೊನೆಗೂ ತವರು ಮೈದಾನ ವಾಂಖೆಡೆ ಕ್ರೀಡಾಂಗಣದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳಿದೆ. ಮೊದಲಿಗೆ ಬೌಲಿಂಗ್‌ನಲ್ಲಿ ಬೊಂಬಾಟ್‌ ಪ್ರದರ್ಶನ ನೀಡಿದ ಮಾಜಿ ಚಾಂಪಿಯನ್‌, ಹಾಲಿ ಚಾಂಪಿಯನ್‌ ಕೆಕೆಆರ್‌ (Mumbai Indians vs Kolkata Knight Riders) ತಂಡದ ಬ್ಯಾಟರ್‌ಗಳಿಗೆ ನಡುಕ ಹುಟ್ಟಿಸಿತು. ಅದರಲ್ಲೂ ಪದಾರ್ಪಣೆ ಪಂದ್ಯವಾಡಿದ ಅಶ್ವನಿ ಕುಮಾರ್‌ 4 ಪ್ರಮುಖ ವಿಕೆಟ್‌ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕೋಲ್ಕತ್ತಾ ಮೈಟ್‌ ರೈಡರ್ಸ್‌, ಕೇವಲ 16.2 ಓವರ್‌ಗಳಲ್ಲಿ 116 ರನ್‌ ಗಳಿಸಿ ಆಲೌಟ್‌ ಆಯ್ತು. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ನಡೆಸಿದ ಮುಂಬೈ ಇಂಡಿಯನ್ಸ್‌ ಕೇವಲ 12.5 ಓವರ್‌ಗಳಲ್ಲಿ 2 ವಿಕೆಟ್‌ ಮಾತ್ರ ಕಳೆದುಕೊಂಡು 121 ರನ್‌ ಗಳಿಸಿ ಗುರಿ ತಲುಪುವ ಮೂಲಕ 8 ವಿಕ...