ಭಾರತ, ಏಪ್ರಿಲ್ 3 -- 2024ರ ಐಪಿಎಲ್ ಫೈನಲಿಸ್ಟ್​ಗಳಾದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ (Kolkata Knight Riders vs Sunrisers Hyderabad) ಮುಖಾಮುಖಿಗೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನ (Eden Gardens, Kolkata) ಸಜ್ಜಾಗಿದೆ. ಸತತ ಸೋಲುಗಳೊಂದಿಗೆ ಕಂಗೆಟ್ಟಿರುವ ಉಭಯ ತಂಡಗಳು ಗೆಲುವಿಗಾಗಿ ಹಾತೊರೆಯುತ್ತಿವೆ. ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿರುವ ಎರಡೂ ತಂಡಗಳು ಕಳೆದ ಪಂದ್ಯಗಳಲ್ಲಿ ಮಾಡಿದ್ದ ತಪ್ಪುಗಳನ್ನು ತಿದ್ದಿಕೊಂಡು ಕಣಕ್ಕಿಳಿಯಲು ಸಜ್ಜಾಗಿವೆ. ಇಂದು (ಏಪ್ರಿಲ್ 3) ಸಂಜೆ 7.30ಕ್ಕೆ ಶುರುವಾಗಲಿದೆ.

ಬ್ಯಾಟಿಂಗ್​​​ನಲ್ಲಿ ರೌದ್ರಾವತಾರ ನಡೆಸುತ್ತಿದ್ದ ಸನ್​​ರೈಸರ್ಸ್​​ಗೆ​​ ಕಳೆದ ಎರಡು ಪಂದ್ಯಗಳಲ್ಲಿ ಮಂಕು ಹೊಡೆದಿದೆ. ಮೊದಲ ಪಂದ್ಯದಲ್ಲಿ 286 ರನ್​ ಗಳಿಸಿ ಐಪಿಎಲ್ ಕಿಕ್ಕೇರಿಸಿದ್ದ ಹೈದರಾಬಾದ್, ಕಳೆದ ಎರಡು ಪಂದ್ಯಗಳಲ್ಲಿ 200ರ ಗಡಿ ದಾಟಲು ಪರದಾಡುತ್ತಿದೆ. ಇದೀಗ ಈಡನ್​ನಲ್ಲಿ ಗೆಲುವಿನ ಲಯಕ್ಕೆ ಮರಳಲು ಪಣತೊಟ್ಟಿದೆ. ಮತ್ತೊಂದೆಡೆ ಕೆಕೆಆರ್ ಬ್ಯಾಟಿಂಗ್ ಜೊತೆಗೆ...