ಭಾರತ, ಏಪ್ರಿಲ್ 26 -- ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ 2025ರ ಇಂಡಿಯನ್ ಪ್ರೀಮಿಯರ್ ಲೀಗ್​ನ 44ನೇ ಪಂದ್ಯವು ಮಳೆಯಿಂದ ರದ್ದಾಯಿತು. 202 ರನ್​​ಗಳ ಗುರಿ ಬೆನ್ನಟ್ಟಿದ ಕೆಕೆಆರ್​, ಮೊದಲ ಓವರ್​​ನಲ್ಲಿ 7 ರನ್ ಕಲೆ ಹಾಕಿತು. ಗೆಲುವಿಗೆ 114 ಎಸೆತಗಳಿಗೆ 195 ರನ್​ಗಳ ಅಗತ್ಯವಿದ್ದ ವೇಳೆ ಆರಂಭವಾದ ಬಿಡುವು ನೀಡದೆ ಸುರಿಯಿತು. ಓವರ್​​ಗಳ ಕಡಿತಕ್ಕೂ ಅವಕಾಶ ನೀಡದ ಹಿನ್ನೆಲೆ ಪಂದ್ಯವು ಮಳೆಗೆ ಆಹುತಿ ಆಯಿತು. ಹೀಗಾಗಿ ಉಭಯ ತಂಡಗಳಿಗೆ ತಲಾ ಒಂದು ಅಂಕ ನೀಡಲಾಗಿದೆ. ಪ್ಲೇಆಫ್ ದೃಷ್ಟಿಯಿಂದ ಕೆಕೆಆರ್​ಗೆ ಈ ಪಂದ್ಯದ ಗೆಲುವು ಅನಿವಾರ್ಯವಾಗಿತ್ತು.

ಕೋಲ್ಕತ್ತಾದ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಕಿಂಗ್ಸ್​ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು. ಪ್ರಭುಸಿಮ್ರಾನ್ ಸಿಂಗ್ (83) ಮತ್ತು ಪ್ರಿಯಾಂಶ್ ಆರ್ಯ (69) ಇಬ್ಬರ ಭರ್ಜರಿ ಅರ್ಧಶತಕಗಳು ಬೃಹತ್ ಮೊತ್ತ ಪೇರಿಸಲು ನೆರವಾಯಿತು. ಕೆಕೆಆರ್ ಪರ ವೈಭವ್ ಆರೋರಾ ...