Bengaluru, ಏಪ್ರಿಲ್ 3 -- ಬೆಂಗಳೂರು: ಬೇಸಿಗೆ ರಜೆ ಈಗಾಗಲೇ ಆರಂಭವಾಗಿದೆ. ಮಕ್ಕಳು ಎಲ್ಲಾದರೂ ಪ್ರವಾಸಕ್ಕೆ ಹೋಗೋಣ ಅಂತಾ ಪೋಷಕರನ್ನು ಗೋಗರೆಯುತ್ತಿರಬಹುದು. ನೀವು ಪ್ರವಾಸ ಯೋಜಿಸುತ್ತಿದ್ದರೆ ಏಳು ಪ್ಯಾಕೇಜ್‍ಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಈ ಬೇಸಿಗೆಯಲ್ಲಿ ದಕ್ಷಿಣ ಭಾರತದ ವಿವಿಧ ತಾಣಗಳಿಗೆ ಏಳು ಹೊಸ ಪ್ರವಾಸ ಪ್ಯಾಕೇಜ್‌ಗಳನ್ನು ಪ್ರಾರಂಭಿಸಿದೆ.

ಕೊಡಗಿಗೆ ಎರಡು ದಿನಗಳ ಪ್ಯಾಕೇಜ್‌ನೊಂದಿಗೆ, ಹೊಸ ಪ್ರವಾಸ ಪ್ಯಾಕೇಜ್‌ಗಳಲ್ಲಿ ಪುದುಚೇರಿಗೆ ನಾಲ್ಕು ದಿನಗಳ ಪ್ಯಾಕೇಜ್ ಮತ್ತು ಮೈಸೂರು-ಊಟಿ-ಕೊಡೈಕೆನಾಲ್, ಗೋವಾ-ಗೋಕರ್ಣ, ಮುನ್ನಾರ್-ತೆಕ್ಕಡಿ, ಊಟಿ-ಕೂನೂರು-ವಯನಾಡ್ ಮತ್ತು ಕೊಡೈಕೆನಾಲ್-ಮುನ್ನಾರ್‌ಗಳಿಗೆ ಐದು ದಿನಗಳ ಪ್ಯಾಕೇಜ್‌ಗಳು ಸೇರಿವೆ.

ಈ ಪ್ಯಾಕೇಜ್‌ಗಳ ಬೆಲೆ ಕೊಡಗಿಗೆ 4,900 ರೂ.ಗಳಿಂದ ಮೈಸೂರು-ಊಟಿ-ಕೊಡೈಕೆನಾಲ್‌ಗೆ 10,820 ರೂ.ಗಳವರೆಗೆ ಇರುತ್ತದೆ. ಕರ್ನಾಟಕ, ವಿಶೇಷವಾಗಿ ಬೆಂಗಳೂರಿನ ಪ್ರವಾಸಿಗರ ಬೇಡಿಕೆಯನ್ನು ಆಧರಿಸಿ ಹೊಸ ಪ್ಯಾಕೇಜ್‌...