ಭಾರತ, ಫೆಬ್ರವರಿ 4 -- Gold Theft on KSRTC Bus: ಬೆಂಗಳೂರಿನಿಂದ ಮಂಗಳೂರು ಕಡೆಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕರೊಬ್ಬರಿಗೆ ಸೇರಿದ 10 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಮತ್ತು 3,000 ರೂಪಾಯಿ ನಗದು ಕಳುವಾಗಿದೆ. ಈ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಕುಣಿಗಲ್‌ ಸಮೀಪ ಪ್ರಯಾಣಿಕರಿಗೆ ಅಲ್ಪ ವಿರಾಮಕ್ಕೆ, ಉಪಾಹಾರ ಸೇವನೆಗೆ ನಿಲ್ಲಿಸಿದ್ದ ವೇಳೆ ಕಳವು ನಡೆದಿರುವ ಶಂಕೆ ವ್ಯಕ್ತವಾಗಿದೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರಾಜಗೋಪಾಲ ಕಾರಂತ ಎಂಬುವವರು ನೀಡಿದ ದೂರಿನಲ್ಲಿ ತಿಳಿಸಿರುವುದಿಷ್ಟು ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಫೆ 1 ರಂದು ರಾತ್ರಿ ದೂರುದಾರ ರಾಜಗೋಪಾಲ ಕಾರಂತ, ಅವರ ಪತ್ನಿ ಮತ್ತು ಅಳಿಯ ಬೆಂಗಳೂರಿನ ಮೆಜೆಸ್ಟಿಕ್ ಬಸ್‌ನಿಲ್ದಾಣದಿಂದ ಬಂಟ್ವಾಳಕ್ಕೆ ಹೋಗುವ ಕೆಎಸ್‌ಆರ್‌ಟಿಸಿ ಬಸ್ ಏರಿದ್ದರು. ರಾಜಗೋಪಾಲ ಅವರ ಪತ್ನಿಯ ತವರು ಮೂಲ್ಕಜೆ ಮಾಡ, ಮಣಿನಾಲ್ಕೂರು ಗ್ರಾಮದಲ್ಲಿದ್ದು ಅಲ್ಲಿ ಹೊರಟಿದ್ದರು. ರಾಜಗೋಪಾಲ ಅವರ ಪತ್ನಿ 3,00...