ಭಾರತ, ಮಾರ್ಚ್ 24 -- ಭಾರತದ ಕ್ರಿಕೆಟಿಗ ಕೆಎಲ್ ರಾಹುಲ್ ಹಾಗೂ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ದಂಪತಿಗಳು ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ. ತಮ್ಮ ಮನೆಗೆ ಮಹಾಲಕ್ಷ್ಮಿ ಆಗಮಿಸಿರುವ ಕುರಿತು ಸೆಲೆಬ್ರಿಟಿ ಕಪಲ್ಸ್ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​​ ಹಂಚಿಕೊಂಡಿದೆ. ಆ ಮೂಲಕ ಅಭಿಮಾನಿಗಳಿಗೆ ಗುಡ್​ನ್ಯೂಸ್ ನೀಡಿದ್ದಾರೆ.

ಮಾರ್ಚ್​ 24ರ ಸೋಮವಾರ ದಂಪತಿಗಳು ಇನ್‌ಸ್ಟಾಗ್ರಾಮ್‌ನಲ್ಲಿ ಜಂಟಿ ಪೋಸ್ಟ್ ಅನ್ನು ಹಂಚಿಕೊಂಡು ಸುದ್ದಿಯನ್ನು ಪ್ರಕಟಿಸಿದರು. ಈ ಸುದ್ದಿಯನ್ನು ಹಂಚಿಕೊಂಡ ದಂಪತಿಗಳು ಎರಡು ಹಂಸಗಳ ವರ್ಣಚಿತ್ರವನ್ನು ಪೋಸ್ಟ್ ಮಾಡಿ, "ಹೆಣ್ಣು ಮಗುವಿನ ಆಶೀರ್ವಾದ ಪಡೆದಿದ್ದೇವೆ ಎಂಬ ಸಂದೇಶವನ್ನು ಬರೆದಿದ್ದಾರೆ.

ರಾಹುಲ್ ಮತ್ತು ಅಥಿಯಾ ತಮ್ಮ ಮಗಳು ಜನಿಸಿದ ಸಿಹಿ ಸುದ್ದಿ ಹಂಚಿಕೊಂಡಿದ್ದರೂ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ. ಪೋಸ್ಟ್ ಹಂಚಿಕೊಂಡ ಬೆನ್ನಲ್ಲೇ ಕ್ರಿಕೆಟ್ ಅಭಿಮಾನಿಗಳು, ಸೆಲೆಬ್ರಿಟಿಗಳು, ಮಾಜಿ ಕ್ರಿಕೆಟಿಗರು ಇಬ್ಬರನ್ನೂ ಅಭಿನಂದಿಸುತ್ತಿದ್ದಾರೆ. ಸೂರ್ಯಕುಮಾರ್, ಶಿಖರ್ ಧವನ್, ಮಯಾಂಕ್ ಅಗರ್ವಾಲ್, ನಟ...