ಭಾರತ, ಮಾರ್ಚ್ 12 -- ಕೆಎಫ್‌ಸಿ ಚಿಕನ್ ಯಾರಿಗೆ ಇಷ್ಟವಿಲ್ಲ ಹೇಳಿ? ಕೆಎಫ್‌ಸಿ ಚಿಕನ್‌ನಂತೆ ಪಾಕವಿಧಾನವನ್ನು ಮನೆಯಲ್ಲಿ ಟ್ರೈ ಮಾಡಬಹುದು. ಇದು ತುಂಬಾ ರುಚಿಕರವಾಗಿರುತ್ತದೆ. ಮಕ್ಕಳಿಂದ ವಯಸ್ಕರವರೆಗೆ ಕೆಎಫ್‌ಸಿ ಚಿಕನ್ ಅಂದ್ರೆ ಇಷ್ಟಪಡುತ್ತಾರೆ. ಇದೇ ತರಹದ ಪಾಕವಿಧಾನ ಮಾಡುವುದು ತುಂಬಾ ಸರಳ. ಮೊಟ್ಟೆ, ಜೋಳದ ಹಿಟ್ಟು, ಕಾರ್ನ್ ಫ್ಲೇಕ್ಸ್‌ಗಳಲ್ಲಿ ಅದ್ದಿದ ಚಿಕನ್ ತುಂಡುಗಳನ್ನು ಗರಿಗರಿಯಾಗುವವರೆಗೆ ಫ್ರೈ ಮಾಡಬೇಕು. ಇದರ ರುಚಿ ಅದ್ಭುತವಾಗಿರುತ್ತದೆ. ಎಲ್ಲರೂ ಇಷ್ಟಪಟ್ಟು ತಿಂತಾರೆ. ಕೆಎಫ್‌ಸಿ ತರಹದ ಫ್ರೈಡ್ ಚಿಕನ್ ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.

ಬೇಕಾಗುವ ಪದಾರ್ಥಗಳು: 1/2 ಕೆಜಿ ಕೋಳಿ, 1 ಕಪ್ ಕಾರ್ನ್ ಹಿಟ್ಟು, 1 ಕಪ್ ಆಲಿವ್ ಎಣ್ಣೆ, 1 ಕಪ್ ಪುಡಿ ಮಾಡಿದ ಕಾರ್ನ್‌ಫ್ಲೇಕ್‌, 2 ಮೊಟ್ಟೆ, 1 ಚಮಚ ಚಿಲ್ಲಿ ಫ್ಲೇಕ್ಸ್, 1 ಚಮಚ ಬೇಸಿಲ್, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಕೆಎಫ್‌ಸಿ ತರಹ ಫ್ರೈಡ್ ಚಿಕನ್ ಮಾಡಲು ಹಂತ ಹಂತದ ವಿಧಾನಗಳನ್ನು ಇಲ್ಲಿ ತಿಳಿಸಲಾಗಿದೆ. ಇದೇ ಪಾಕವಿಧಾನವನ್ನು ಅನುಸರಿಸಿದರೆ...