ಭಾರತ, ಏಪ್ರಿಲ್ 21 -- ಕೆಆರ್‌ಎಸ್‌ ನೀರಿನ ಮಟ್ಟ: ಕರ್ನಾಟಕದ ರಾಜಧಾನಿ ಬೆಂಗಳೂರಿಗೂ ಕುಡಿಯುವ ನೀರು ಪೂರೈಸುವ ಕೆಆರ್‌ಎಸ್‌ ಅಣೆಕಟ್ಟೆಯ ನೀರಿನ ಮಟ್ಟ ಭಾನುವಾರ ಬೆಳಿಗ್ಗೆ 99.60 ಅಡಿಗೆ ಇಳಿಕೆಯಾಗಿದೆ. ಇದರೊಂದಿಗೆ ಇನ್ನೆರಡು ತಿಂಗಳು ಅಂದರೆ ಮಳೆ ಬರುವ ತನಕ ಕುಡಿಯುವ ನೀರಿಗೆ ಉಳಿಕೆ ನೀರು ಸಾಕಾದೀತಾ ಎಂಬ ಪ್ರಶ್ನೆ ಮೂಡಿದೆ. ಆದಾಗ್ಯೂ, ಕಳೆದ 10 ವರ್ಷಗಳ ಅವಧಿಯಲ್ಲಿ ಏಪ್ರಿಲ್‌ನಲ್ಲಿ ನೀರಿನ ಪ್ರಮಾಣ ಎಷ್ಟು ಇತ್ತು ಎಂಬ ದತ್ತಾಂಶ ಗಮನಿಸಿದರೆ ಪರಿಸ್ಥಿತಿ ಹೇಗಿದೆ ಎಂಬ ಚಿತ್ರಣ ಮನದಟ್ಟು ಮಾಡಿಕೊಳ್ಳುವುದು ಸಾಧ್ಯವಾದೀತು.

ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಏಪ್ರಿಲ್ 19 ರಂದು ನೀರಿನ ಮಟ್ಟ 100.8 ಅಡಿ ಇತ್ತು. ಭಾನುವಾರ ಬೆಳಿಗ್ಗೆ (ಏಪ್ರಿಲ್ 20) ನೀರಿನ ಮಟ್ಟ 100 ಅಡಿಗಿಂತ ಕೆಳಕ್ಕೆ ಅಂದರೆ 99.60 ಅಡಿಗೆ ಇಳಿಕೆಯಾಗಿದೆ. ಆದಾಗ್ಯೂ, ಇನ್ನು ಎರಡು ತಿಂಗಳುಗಳ ಕಾಲ ಕುಡಿಯುವ ಹಾಗೂ ಬೆಳೆಗೆ ನೀರಿನ ಕೊರತೆ ಎದುರಾಗುವುದಿಲ್ಲ ಎಂದು ಸರ್ಕಾರದ ಮೂಲಗಳು ಭರವಸೆ ವ್ಯಕ್ತಪಡಿಸಿವೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ ಕೆಆರ್‌ಎಸ್ ಆಣೆಕಟ್...