Bangalore, ಮೇ 24 -- ನಟಿ ಪ್ರಣಿತಾ ಸುಭಾಷ್‌ ಅವರು 78ನೇ ಕಾನ್‌ ಫಿಲ್ಮ್‌ ಫೆಸ್ಟಿವಲ್‌ನ ರೆಡ್‌ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಸುಂದರ ಕ್ಷಣದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕೆಂಪು ಉಡುಗೆ ಮಾತ್ರವಲ್ಲದೆ, ಬೇಬಿ ಪಿಂಕ್‌ ಉಡುಗೆ ಮತ್ತು ಸೀರೆಯಲ್ಲೂ ಅಲ್ಲಿ ಮಿಂಚಿದ್ದಾರೆ. ಈ ಸಂದರ್ಭದಲ್ಲಿ ನಟಿ ಮಾಧ್ಯಮಗಳೊಂದಿಗೆ ಮಾತನಾಡಿ ತನ್ನ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ನನಗೆ ಕಾನ್‌ ಚಿತ್ರೋತ್ಸವದ ರೆಡ್‌ ಕಾರ್ಪೆಟ್‌ನಲ್ಲಿ ಕಾಣಿಸಿಕೊಳ್ಳಬೇಕು ಎಂದು ಸಣ್ಣ ವಯಸ್ಸಿನಿಂದಲೂ ಆಸೆ ಇತ್ತು. ಬಾಲ್ಯದ ಆ ಕನಸು ನನಗೆ ಈಗ ಈಡೇರಿದೆ. ಭಾರತೀಯ ಸಿನಿಮಾಗಳು ಈ ಹಂತಕ್ಕೆ ಬಂದಿರುವುದರಿಂದ ನಮಗೆ ಅವಕಾಶ ದೊರಕಿದೆ ಎಂದು ನಟಿ ಪ್ರಣಿತಾ ಹೇಳಿದ್ದಾರೆ.

78ನೇ ಕಾನ್‌ ಫಿಲ್ಮ್‌ ಫೆಸ್ಟಿವಲ್‌ ಮೇ 13ರಿಂದ ಮೇ 24ರವರೆಗೆ ನಡೆಯುತ್ತದೆ. ಇಂದು ಕಾನ್‌ ಫೆಸ್ಟಿವಲ್‌ ಕೊನೆಯ ದಿನವಾಗಿದೆ. ಈ ಹಬ್ಬದಲ್ಲಿ ಭಾಗವಹಿಸಲು ಕೆಲವು ನಟಿಯರಿಗೆ ಮಾತ್ರ ಅವಕಾಶ ದೊರಕುತ್ತದೆ. ಪ್ರಣಿತಾ ಸುಭಾಷ್‌ಗೂ ಈ ಅವಕಾಶ ದೊರಕಿದೆ....