Bengaluru, ಏಪ್ರಿಲ್ 26 -- ಅರ್ಥ: ಭಕ್ತಿಯೋಗದ ನಿಯಮಗಳನ್ನು ಅಭ್ಯಾಸ ಮಾಡಲು ನಿನಗೆ ಸಾಧ್ಯವಾಗದಿದ್ದರೆ ನನಗಾಗಿ ಕೆಲಸ ಮಾಡಲು ಪ್ರಯತ್ನಿಸು. ಏಕೆಂದರೆ ನನಗಾಗಿ ಕೆಲಸ ಮಾಡುವುದರಿಂದಲೂ ನೀನು ಪರಿಪೂರ್ಣಸ್ಥಿತಿಗೆ ಬರುವೆ.

ಭಾವಾರ್ಥ: ಗುರುವಿನ ಮಾರ್ಗದರ್ಶನದಲ್ಲಿ ಭಕ್ತಿಯೋಗದ ನಿಯಂತ್ರಕ ತತ್ವಗಳನ್ನು ಆಚರಿಸಲಾರದವನು ಕೂಡಾ ಪರಮ ಪ್ರಭುವಿಗಾಗಿ ಕೆಲಸ ಮಾಡುವ ಮೂಲಕ ಈ ಪರಿಪೂರ್ಣ ಘಟ್ಟಕ್ಕೆ ಸೆಳೆದುಕೊಳ್ಳಲ್ಪಡಬಹುದು. ಈ ಕೆಲಸವನ್ನು ಮಾಡುವುದು ಹೇಗೆ ಎನ್ನುವುದನ್ನು ಹನ್ನೊಂದನೆಯ ಅಧ್ಯಾಯದ ಐವತ್ತೈದನೆಯ ಶ್ಲೋಕದಲ್ಲಿ ಹೇಳಿದೆ. ಕೃಷ್ಣಪ್ರಜ್ಞೆಯ ಪ್ರಸಾರದ ಪರವಾಗಿರಬೇಕು. ಕೃಷ್ಣಪ್ರಜ್ಞೆಯ ಪ್ರಸಾರದ ಕಾರ್ಯದಲ್ಲಿ ನಿರತರಾಗಿರುವ ಭಕ್ತರು ಎಷ್ಟೋ ಮಂದಿ ಇದ್ದಾರೆ. ಅವರಿಗೆ ಸಹಾಯವು ಅಗತ್ಯ. ಆದುದರಿಂದ ಭಕ್ತಿಯೋಗದ ನಿಯಂತ್ರಕ ತತ್ವಗಳನ್ನು ನೇರವಾಗಿ ಅಭ್ಯಾಸಮಾಡಲಾರದವನೂ ಇಂತಹ ಕಾರ್ಯದಲ್ಲಿ ನೆರವಾಗಬಹುದು. ಎಲ್ಲ ಪ್ರಯತ್ನಕ್ಕೂ ಭೂಮಿ, ಬಂಡವಾಳ, ವ್ಯವಸ್ಥೆ ಮತ್ತು ಶ್ರಮಗಳು ಅಗತ್ಯ.

ವಾಣಿಜ್ಯ ವ್ಯವಹಾರದಲ್ಲಿ ಮನುಷ್ಯನಿಗೆ ವಾಸಿಸಲು ಒ...