Bagalkot, ಏಪ್ರಿಲ್ 19 -- ಕೃಷ್ಣಾ ಹಾಗೂ ಮಲಪ್ರಭಾ ನದಿಯ ಸಂಗಮ ಹಾಗೂ ಬಸವಣ್ಣ ಐಕ್ಯವಾದ ಸ್ಥಳವೆಂಬ ಇತಿಹಾಸ ಇರುವ ಕೂಡಲಸಂಗಮದಲ್ಲಿ ಸಂಗಮೇಶ್ವರ ರಥೋತ್ಸವ ಭಕ್ತರ ಸಡಗರದ ನಡುವೆ ನಡೆಯಿತು.
ವಿಶೇಷವಾಗಿ ಅಲಂಕರಿಸಿದ್ದ ರಥಗಳಲ್ಲಿ ಸಂಗಮೇಶ್ವರ ಉತ್ಸವಮೂರ್ತಿಯನ್ನು ತಂದಿರಿಸಿದಾಗ ಭಕ್ತರು ರಥವನ್ನು ಎಳೆದರು.
ಕೂಡಲಸಂಗಮದ ದೇವಸ್ಥಾನದ ಪಕ್ಕದಿಂದ ಆರಂಭಿಸಿ ಪ್ರಮುಖ ರಸ್ತೆಯಲ್ಲಿ ರಥವು ಸಂಚರಿಸಿತು. ಈ ವೇಳೆ ಭಕ್ತರು ಎಲ್ಲೆಡೆ ನಿಂತು ಭಕ್ತಿಯಿಂದ ನಮಿಸಿದರು.
ಈ ಬಾರಿಯೂ ರಥವನ್ನು ಸುಂದರವಾಗಿಯೇ ಅಲಂಕರಿಸಲಾಗಿತ್ತು. ರಥ ಎಳೆದ ಬಳಿಕ ಮಕ್ಕಳು ಖುಷಿಯಿಂದ ರಥವನ್ನೇರಿದರು.
ಕೂಡಲಸಂಗಮದ ಸಂಗಮನಾಥದ ರಥೋತ್ಸವ ಹಿನ್ನೆಲೆಯಲ್ಲಿ ಕೂಡಲಸಂಗಮೇಶ್ವರ ದೇಗುಲಕ್ಕೆ ವಿಶೇಷ ಪುಷ್ಪಾಲಂಕರ ಮಾಡಲಾಗಿತ್ತು.
ಕೂಡಲಸಂಗಮದ ವೃತ್ತದಲ್ಲೂ ರಥೋತ್ಸವಕ್ಕೆ ಪುಷ್ಪಾಲಂಕಾರ ಮಾಡಿ ಬಾವುಟಗಳನ್ನು ಕಟ್ಟಲಾಗಿತ್ತು.
ಬಾಗಲಕೋಟೆ, ವಿಜಯಪುರ,ಯಾದಗಿರಿ, ರಾಯಚೂರು, ಧಾರವಾಡ, ಕೊಪ್ಪಳ ಸಹಿತ ನಾನಾ ಭಾಗಗಳಿಂದ ಭಕ್ತರು ರಥೋತ್ಸವಕ್ಕೆ ಆಗಮಿಸಿದ್ದರು.
Published by ...
Click here to read full article from source
To read the full article or to get the complete feed from this publication, please
Contact Us.