ಭಾರತ, ಫೆಬ್ರವರಿ 6 -- ದಟ್ಟವಾದ, ಉದ್ದ ಸುಂದರ ಕೂದಲು ತಮ್ಮದಾಗಬೇಕು ಎಂದು ಪ್ರತಿ ಹೆಣ್ಣುಮಕ್ಕಳು ಬಯಸುತ್ತಾರೆ. ಆದರೆ ಎಲ್ಲರಿಗೂ ಉದ್ದ ಕೂದಲು ಪಡೆಯಲು ಸಾಧ್ಯವಾಗುವುದಿಲ್ಲ. ಮುಖದಂತೆಯೇ, ಕೂದಲಿಗೂ ಸರಿಯಾದ ಆರೈಕೆಯ ಅಗತ್ಯವಿದೆ. ಇಲ್ಲದಿದ್ದರೆ ಕೂದಲು ಹಾನಿಗೊಳಗಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಕೂದಲಿನ ಆರೈಕೆಯಲ್ಲಿ ಸಾಮಾನ್ಯವಾಗಿ ಉತ್ತಮ ಶಾಂಪೂ, ಕಂಡಿಷನರ್, ಸೀರಮ್, ಮಾಸ್ಕ್ ಮತ್ತು ಎಣ್ಣೆ ಸೇರಿವೆ. ಇದರೊಂದಿಗೆ ಹೆಚ್ಚುವರಿ ಆರೈಕೆಗಾಗಿ ಇನ್ನೂ ಕೆಲವು ವಿಧಾನಗಳನ್ನು ಅನುಸರಿಸಬೇಕು.

ಕೆಲವು ಹುಡುಗಿಯರು ಕಾಲಕಾಲಕ್ಕೆ ತಮ್ಮ ಕೂದಲನ್ನು ಕತ್ತರಿಸುವುದು ಅಥವಾ ಟ್ರಿಮ್ ಮಾಡಿಸುತ್ತಾರೆ. ಕೂದಲಿನ ತುದಿಗಳನ್ನು ಸಾಂದರ್ಭಿಕವಾಗಿ ಕತ್ತರಿಸುವುದರಿಂದ ಬೆಳವಣಿಗೆ ವೇಗಗೊಳ್ಳುತ್ತದೆ ಎಂದು ನಂಬಲಾಗಿದೆ. ಕೂದಲನ್ನು ಟ್ರಿಮ್ ಮಾಡಿಸುವುದು ನಿಜವಾಗಿಯೂ ಕೂದಲು ಬೆಳೆಯಲು ಸಹಾಯ ಮಾಡುತ್ತದೆಯೇ? ಹಾಗಾದರೆ ಎಷ್ಟು ಬಾರಿ ಕತ್ತರಿಸಬೇಕು ಎಂಬಂತಹ ವಿಷಯಗಳ ಬಗ್ಗೆ ಇಲ್ಲಿದೆ ಮಾಹಿತಿ.

ಕೂದಲನ್ನು ಟ್ರಿಮ್ ಮಾಡಿಸುವುದರಿಂದ ಅದು ವೇಗ...