Bengaluru, ಏಪ್ರಿಲ್ 15 -- ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಸಮಿತಿ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಮಾಡಿದೆ. ಹಾಗೆಯೇ ತಟಸ್ಥ ದಿಂದ ಅಕಮ್ಮಡೇಟಿವ್‌ಗೆ ನಿಲುವನ್ನು ಬದಲಾಯಿಸಿದೆ. ಇದರಿಂದ ಈ ವರ್ಷ ಸ್ಥಿರ ಠೇವಣಿ ದರ ಕಡಿಮೆಯಾಗಬಹುದು ಎಂದು ಹೇಳಲಾಗಿದೆ. ಅಂದರೆ ಹಿರಿಯ ನಾಗರಿಕರಿಗೆ ಇದು ವಿಶೇಷವಾಗಿ ಪರಿಣಾಮ ಬೀರುತ್ತದೆ.

ಬ್ಯಾಂಕ್ ಆಫ್ ಇಂಡಿಯಾ ಏಪ್ರಿಲ್ 15 ರಿಂದ ತನ್ನ ವಿಶೇಷ ದರದ 400 ದಿನಗಳ ಸ್ಥಿರ ಠೇವಣಿ ಯೋಜನೆಯನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಉಳಿತಾಯ ಖಾತೆ ಬಡ್ಡಿದರವನ್ನು ಶೇ. 3 ರಿಂದ ಶೇ. 2.75ಕ್ಕೆ ಇಳಿಸಿದೆ. ಬಡ್ಡಿದರ ಕುಸಿಯುತ್ತಿರುವುದರಿಂದ ಹಿರಿಯ ನಾಗರಿಕರು ದೀರ್ಘಾವಧಿಯ ಎಫ್‌ಡಿಗಳು, ಸಣ್ಣ ಉಳಿತಾಯ ಖಾತೆಯಲ್ಲಿ ಹೂಡಿಕೆ ಮಾಡುವುದು ಉತ್ತಮ.

ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು (SCSS) ಹೆಚ್ಚಿನ ಬಡ್ಡಿದರವನ್ನು ನೀಡುತ್ತವೆ. ಅವರು ಈ ಯೋಜನೆಯಲ್ಲಿ ರೂ. 30 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಹಾಗೆಯೇ ಕುಟುಂಬದ ಹೂಡಿಕೆ 60 ಲಕ್...