ಭಾರತ, ಮಾರ್ಚ್ 9 -- ನ್ಯೂಜಿಲೆಂಡ್​ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್​ ಪಂದ್ಯದಲ್ಲಿ ತನ್ನ ಸೋಮಾರಿತನದ ಕಾರಣ ಮೈಕಲ್ ಬ್ರೇಸ್​ವೆಲ್​ ಅವರ ಸುಲಭ ರನೌಟ್ ಮಿಸ್ ಮಾಡಿದ ಕುಲ್ದೀಪ್ ಯಾದವ್ ವಿರುದ್ಧ ವಿರಾಟ್ ಕೊಹ್ಲಿ ಮೈದಾನದಲ್ಲೇ ಕಿಡಿಕಾರಿದ್ದಾರೆ. ಆದರೆ ಇದು ಭಾರತಕ್ಕೆ ದುಬಾರಿಯೂ ಆಗಿದೆ. ಕಳೆದ ಪಂದ್ಯದಲ್ಲೂ ಇದೇ ರೀತಿ ಫೀಲ್ಡಿಂಗ್​ನಲ್ಲಿ ನಿರ್ಲಕ್ಷ್ಯ ತೋರಿದ್ದ ಕುಲ್ದೀಪ್​ಗೆ ಕೊಹ್ಲಿ ಜೊತೆಗೆ ರೋಹಿತ್​ ಶರ್ಮಾ ಕೂಡ ಬೈದಿದ್ದರು. ಆದರೆ ಅವತ್ತು ರನೌಟ್​ಗೆ ಅವಕಾಶ ಇರಲಿಲ್ಲ.

ಸುಲಭ ರನೌಟ್ ಮಿಸ್ ಮಾಡಿದ ಹಿನ್ನೆಲೆ ಮೈಕಲ್ ಬ್ರೇಸ್​ವೆಲ್ ಭಾರತ ತಂಡಕ್ಕೆ ಕಂಟಕವಾದರು. ಬ್ರೆಸ್​ವೆಲ್ ಆಗಷ್ಟೆ ಕ್ರೀಸ್​ಗೆ ಬಂದು 6 ರನ್ ಸಿಡಿಸಿದ್ದರು. 41ನೇ ಓವರ್​​ನ 2ನೇ ಎಸೆತದಲ್ಲಿ ಈ ಘಟನೆ ನಡೆದಿಯಿತು. ಮೈಕೆಲ್ ಬ್ರೇಸ್​ವೆಲ್ ಚೆಂಡನ್ನು ಬ್ಯಾಕ್​ವರ್ಡ್ ಪಾಯಿಂಟ್ ಕಡೆಗೆ ಪಂಚ್ ಮಾಡಿ ಸಿಂಗಲ್ ಪಡೆಯಲು ಓಡಿದರು. ಆದರೆ ಓಡುವಾಗ ನಾನ್​ಸ್ಟ್ರೈಕ್ ಕಡೆಯಿಂದ ಡ್ಯಾರಿಲ್ ಮಿಚೆಲ್​ ಡಿಕ್ಕಿ ಹೊಡೆಯುವ ಸನ್ನಿವೇಶ ಎದುರಾಯಿತು. ಹೀಗಾಗಿ ...