ಭಾರತ, ಮೇ 23 -- ಕುಲದಲ್ಲಿ ಕೀಳ್ಯಾವುದೋ ಸಿನಿಮಾ ವಿಮರ್ಶೆ: 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಮಡೆನೂರು ಮನು ಅಭಿನಯದ 'ಕುಲದಲ್ಲಿ ಕೀಳ್ಯಾವುದೋ' ಚಿತ್ರವು ಇಂದು ಬಿಡುಗಡೆಯಾಗಿದೆ. ಕಿರುತೆರೆಯಲ್ಲಿ ತಮ್ಮ ಪ್ರತಿಭೆಯಿಂದ ಗಮನಸೆಳೆದಿದ್ದ ಮನು ಅಭಿನಯದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲವಿತ್ತು. ಇಷ್ಟಕ್ಕೂ ಚಿತ್ರದ ಕಥೆ ಏನು? ಎಂದು ನೀವೇ ಮುಂದೆ ಓದಿ ...

ಊರಿನಲ್ಲಿ ಮೇಲು-ಕೀಳುಗಳ ಹಿಂಸೆ ತಡೆಯಲಾರದೆ ಅದೆಷ್ಟೋ ವರ್ಷಗಳ ಹಿಂದೆ ಮುತ್ತರಸ (ಯೋಗರಾಜ್‍ ಭಟ್‍) ಊರು ಬಿಟ್ಟು ಬಂದು ಕಾಡು ಸೇರುತ್ತಾನೆ. ಕ್ರಮೇಣ ಕಾಡಿನ ಮಧ್ಯೆ ತನ್ನದೇ ತಾಂಡ ಕಟ್ಟುತ್ತಾನೆ. ಅವನ ನಂತರದ ತಲೆಮಾರಿನವರನ್ನು ಅರಣ್ಯ ಇಲಾಖೆಯವರು ಅವರಿದ್ದ ಸ್ಥಳವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಿ, ಊರಿಗೆ ಕಳುಹಿಸುತ್ತಾರೆ. ಹೀಗೆ ತನ್ನ ಜನರೊಂದಿಗೆ ನಾಡು ಸೇರುವ ಮುತ್ತರಸನ ವಂಶಜ ಮುತ್ತರಸ (ಮಡೆನೂರು ಮನು), ತನ್ನವರನ್ನು ವಾಪಸ್ಸು ಕಾಡಿಗೆ ಸೇರಿಸಲು ಹಲವು ಹೋರಾಟಗಳನ್ನು ಮಾಡುತ್ತಾನೆ. ಈ ಹಿನ್ನೆಲೆಯಲ್ಲಿ ಏನೇಲ್ಲಾ ಆಗುತ್ತದೆ ಎಂಬುದೇ ಚಿತ್ರದ ಕಥೆ.

'ಕುಲದಲ್ಲಿ...