Bengaluru, ಮೇ 9 -- ಕುರ್ತಾ ಧರಿಸಿದಾಗ ಸ್ಟೈಲಿಶ್ ಮತ್ತು ಆಕರ್ಷಕವಾಗಿ ಕಾಣುತ್ತಿಲ್ಲ ಎಂದು ಪಾಶ್ಚಾತ್ಯ ಬಟ್ಟೆಗಳನ್ನು ಧರಿಸುವ ಅಗತ್ಯವಿಲ್ಲ. ಬದಲಾಗಿ ಕುರ್ತಾವನ್ನು ಹೊಸ ರೀತಿಯಲ್ಲಿ ಹೊಲಿಯಬಹುದು. ಇದರಿಂದ ನೀವು ಇತರ ಹುಡುಗಿಯರಂತೆ ಸುಂದರವಾಗಿ ಮತ್ತು ಆಕರ್ಷಕವಾಗಿ ಕಾಣುತ್ತೀರಿ. ಸರಳ ಕುರ್ತಾ ಧರಿಸಿ ಬೇಜಾರಾಗಿದ್ದರೆ ಇತ್ತೀಚಿನ ವಿನ್ಯಾಸದ ತೋಳುಗಳನ್ನು ಹೊಲಿಸಿ. ಇದು ನಿಮ್ಮ ನೀರಸವಾಗಿ ಕಾಣುವ ಕುರ್ತಾಗೆ ಹೊಸ ಜೀವ ತುಂಬುತ್ತದೆ, ಅಲ್ಲದೆ ಆಕರ್ಷಕವಾಗಿ ಕಾಣುವಿರಿ. ಕುರ್ತಾದ ಈ ಡಿಸೈನರ್ ಸ್ಲೀವ್ ವಿನ್ಯಾಸ ಇಲ್ಲಿದೆ.

ಕೆಲವು ಹೆಣ್ಮಕ್ಕಳು ತ್ರಿ ಟು ಫೋರ್ (ಮುಕ್ಕಾಲು ಭಾಗ) ತೋಳುಗಳನ್ನು ಹೊಂದಿರುವ ಕುರ್ತಾ ಧರಿಸಲು ಇಷ್ಟಪಡುತ್ತಾರೆ. ಆದರೆ ಈ ತೋಳನ್ನು ಸ್ವಲ್ಪ ವಿಭಿನ್ನವಾಗಿಸಲು, ಈ ರೀತಿಯ ವಿನ್ಯಾಸ ಮಾಡಿ. ಚಿನ್ನದ ಪೈಪಿಂಗ್ ಇರುವ ಬಟ್ಟೆಯ ಬಟನ್ ಆಕರ್ಷಕವಾಗಿ ಕಾಣುತ್ತದೆ.

ಈ ರೀತಿಯಲ್ಲಿ ಕುರ್ತಾದ ತೋಳಿನ ಮೇಲಿನ ಸಿಂಗಲ್ ಬಟನ್ ಕ್ಲಾಸಿಕ್ ನೋಟವನ್ನು ನೀಡುತ್ತದೆ. ಇದನ್ನು ಮುಕ್ಕಾಲು ಭಾಗ ಮತ್ತು ಅರ್ಧ ತೋಳುಗಳ ಮೇಲ...