Bengaluru, ಮೇ 5 -- ಮಹಿಳೆಯರು ಕುರ್ತಾಗೆ ಪಲಾಝೊ ಅಥವಾ ಸಲ್ವಾರ್ ಧರಿಸಲು ಇಷ್ಟಪಡುತ್ತಾರೆ. ಪ್ಯಾಂಟ್, ಪಲಾಝೋಗಳು ಸೊಗಸಾಗಿ ಕಾಣುವುದಲ್ಲದೆ ಸ್ಟೈಲಿಶ್ ಆಗಿಯೂ ಕಾಣುತ್ತವೆ. ನಿಮ್ಮ ವಾರ್ಡ್ರೋಬ್‌ನಲ್ಲಿ ಹೊಸ ವಿನ್ಯಾಸದ ಸಂಗ್ರಹವನ್ನು ಸೇರಿಸಲು ಬಯಸಿದರೆ, ಕುರ್ತಾದೊಂದಿಗೆ ತುಂಬಾ ಚೆನ್ನಾಗಿ ಕಾಣುವ 11 ವಿನ್ಯಾಸಗಳು ಇಲ್ಲಿವೆ.

ಪಲಾಝೊ ಸಾಂಪ್ರದಾಯಿಕವಾಗಿರಬೇಕೆಂದರೆ ಟಸೆಲ್‌ಗಳ ವಿನ್ಯಾಸವು ಉತ್ತಮವಾಗಿ ಕಾಣುತ್ತದೆ. ಪಲಾಝೊದ ಮೇಲ್ಭಾಗಕ್ಕೆ ಹೊಂದಿಕೆಯಾಗುವ ಟಸೆಲ್‌ಗಳನ್ನು ಜೋಡಿಸಬಹುದು.

ಪಲಾಝೊವನ್ನು ಸ್ವಲ್ಪ ವಿಭಿನ್ನ ಶೈಲಿಯಲ್ಲಿ ಹೊಲಿಯಲು ಈ ವಿನ್ಯಾಸದಿಂದ ನೀವು ಐಡಿಯಾಗಳನ್ನು ತೆಗೆದುಕೊಳ್ಳಬಹುದು. ಇದು ಉದ್ದವಾದ ಕುರ್ತಿಯೊಂದಿಗೆ ಅದ್ಭುತವಾಗಿ ಕಾಣುತ್ತದೆ.

ಪಲಾಝೊ ಕೊನೆಯಲ್ಲಿ ಈ ರೀತಿ ಜೋಡಿಸಲಾದ ಕಾಂಟ್ರಾಸ್ಟ್ ಮುತ್ತುಗಳು ಅಲಂಕಾರಿಕವಾಗಿ ಕಾಣುತ್ತದೆ. ಕುರ್ತಾಗೆ ವಿಶಿಷ್ಟ ಮಾದರಿಯ ಪಲಾಝೊ ಪಡೆಯಲು ಈ ವಿನ್ಯಾಸವನ್ನು ಆರಿಸಿಕೊಳ್ಳಿ.

ಸಲ್ವಾರ್ ಮತ್ತೊಮ್ಮೆ ಟ್ರೆಂಡ್‌ಗೆ ಬಂದಿದೆ. ನೀವು ಸಲ್ವಾರ್‌ಗೆ ಫ್ಯಾನ್ಸಿ ಲುಕ...